ಡೇವಿಡ್ ಸಿಮಿಯೋನ್‌ಗೆ ಎಂಎಲ್ಸಿ ಸ್ಥಾನ ನೀಡಿ

Untitled design (1)
ಜಾಕೋಬ್ ದೊಡ್ಡಮನಿ
Published on

ರಾಯಚೂರು: ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಡೇವಿಡ್ ಸಿಮಿಯೋನ್‌ರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡುವ ಮೂಲಕ ಕ್ರೈಸ್ತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಸಾಹಿತಿ ಜಾಕೋಬ್ ದೊಡ್ಡಮನಿ ಒತ್ತಾಯಿಸಿದರು.


ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅಲ್ಪಸಂಖ್ಯಾತರಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಕ್ರೈಸ್ತ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ಅನ್ಯಾಯವಾಗಿದರ.

ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಪಕ್ಷಗಳು ಸಮುದಾಯವನ್ನು ಬಳಸಿಕೊಳ್ಳುತ್ತಿವೆ. ಸಮುದಾಯ ನಿರಂತರವಾಗಿ ನಿರ್ಲಕ್ಷೃಕ್ಕೆ ಗುರಿಯಾಗುತ್ತಾ ಬಂದಿದೆ. ಅಧಿಕಾರ ಹಂಚಿಕೆ, ನೇಮಕಾತಿಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.


ಸಮುದಾಯದ ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರಗಳು ಗಮನ ಹರಿಸುತ್ತಿಲ್ಲ. ಕಳೆದ 45 ವರ್ಷಗಳ ಹಿಂದೆ ಆರ್.ಎಸ್.ಮನೋಹರರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿದ್ದನ್ನು ಬಿಟ್ಟರೆ ಅಲ್ಲಿಂದ ಕಲ್ಯಾಣ ಕರ್ನಾಟಕ ಭಾಗದ ಕ್ರೈಸ್ತ ಸಮುದಾಯದವರನ್ನು ನಾಮ ನಿರ್ದೇಶನ ಮಾಡಿಲ್ಲ.

ಆದ್ದರಿಂದ ಡೇವಿಡ್ ಸಿಮಿಯೋನ್‌ರನ್ನು ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಮಾಡಬೇಕೆಂದು ಒತ್ತಾಯಿಸಿದರು. ಕ್ರೈಸ್ತ ಧರ್ಮಗುರುಗಳಾದ ಜಾನ್‌ವೆಸ್ಲಿ, ಜೇಮ್ಸ್ ಮಟಮಾರಿ, ಮುಖಂಡ ಸ್ಯಾಮುವೇಲ್ ಇಂದವಾಸಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net