ಕಳ್ಳತನ ಕಡಿವಾಣಕ್ಕೆ ಸಿಸಿ ಕ್ಯಾಮರಾ ಅಳವಡಿಸಿ

Arkera manavi
ಅರಕೇರಾದಲ್ಲಿ ತಹಸೀಲ್ದಾರ್ ಅಮರೇಶ ಬೀರಾದಾರಗೆ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್, ಹನುಮೇಶ ನಾಯಕ, ಪ್ರಮುಖರಾದ ಭಗವಂತರಾಯ, ಲಕ್ಷ್ಮಣ ನಾಯಕ, ಅಂಬರೀಷ್ ನಾಯಕ ಇದ್ದರು.
Published on

ಅರಕೇರಾ: ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಳ್ಳತನ ಪ್ರಕರಣಗಳ ಕಡಿವಾಣಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಅಮರೇಶ ಬಿರಾದಾರಗೆ ರೈತ ಸಂಘದ ತಾಲೂಕು ಘಟಕ ಸೋಮವಾರ ಮನವಿ ಸಲ್ಲಿಸಿತು.

ತಾಲೂಕು ಅಧ್ಯಕ್ಷ ಹನುಮೇಶ ನಾಯಕ ಮಾತನಾಡಿ, ಪಟ್ಟಣದಲ್ಲಿ ಕಳವು ಪ್ರಕರಣಗಳು ಹೆಚ್ಚಿವೆ. ಮನೆ, ಜಾನುವಾರು, ಅಂಗಡಿಗಳಲ್ಲಿ ಕಳ್ಳತನ ನಡೆಯುತ್ತಿವೆ. ಅಲ್ಲದೆ ಗುರುವಾರ ನಡೆಯುವ ವಾರದ ಸಂತೆಯಲ್ಲಿ ಅಪರಿಚಿತರ ಓಡಾಟದ ಜತೆಗೆ ಸರಗಳ್ಳತನ, ಪಿಕ್ ಪಾಕೆಟ್ ಮಾಡಲಾಗುತ್ತಿದೆ.

ಕಳ್ಳತನ ನಿಯಂತ್ರಣ ಹಾಗೂ ಕಳ್ಳರ ಪತ್ತೆ ಹಚ್ಚಲು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಹಾಜಿ ಮಸ್ತಾನ್, ಭಗವಂತ್ರಾಯ, ಲಕ್ಷ್ಮಣ ನಾಯಕ, ಅಂಬರೀಷ್ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net