ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯ

29athnai_aparaj_02-Web
ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘದಿಂದ ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ದಶರಥ ನಾಯಕ, ರಾಜು ಜಂಬಗಿ, ರಾಜು ಪೂಜಾರಿ, ಬಾಬು ಜತ್ತಿ, ಅಣ್ಣಪ್ಪ ಉದ್ದನಗೋಳ ಇತರರು ಇದ್ದರು.
Published on

ಅಥಣಿ : ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ಅಥಣಿ ತಹಸೀಲ್ದಾರ್ ದುಂಡಪ್ಪ ಕೋಮಾರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲಾಗದೆ ಹಾಗೂ ದರ ಕುಸಿತದಿಂದಾಗಿ ರೈತರಿಗೆ ಹಾನಿಯಾಗಿದೆ. ಏಳೆಂಟು ತಿಂಗಳ ಹಿಂದೆ ಬಂದಿದ್ದ ಕೃಷ್ಣಾ ನದಿ ಪ್ರವಾಹ ಮತ್ತು ಈಗಿನ ಕರೊನಾ ಸಂಕಷ್ಟ ರೈತರಿಗೆ ನುಂಗಲಾರದ ತುತ್ತಾಗಿದೆ. ಇದರಿಂದಾಗಿ ರೈತರು ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಆಗದೆ ಇತ್ತ ಬೆಳೆ ಕಟಾವು ಮಾಡಲಾಗದೆ ಜಮೀನಿನಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿ ಅನ್ನದಾತ ಅಕ್ಷರಶಃ ಅನಾಥನಾಗಿದ್ದಾನೆ. ಸರ್ಕಾರಗಳು ರೈತರ ಕಣ್ಣೀರು ಒರೆಸಲು ಮುಂದಾಗಬೇಕಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಪ್ರಕಾಶ ಪೂಜೇರಿ ಆಗ್ರಹಿಸಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಬಂಗಾರೆಪ್ಪನವರ, ಆರ್.ಆರ್.ಬುರ್ಲಿ, ಎಂ.ವಿ.ಬಿರಾದಾರ, ದಶರಥ ನಾಯಕ, ರಾಜು ಜಂಬಗಿ, ರಾಜು ಪೂಜಾರಿ, ಬಾಬು ಜತ್ತಿ, ಅಣ್ಣಪ್ಪ ಉದ್ದನಗೋಳ, ಗೌಡಪ್ಪ ರಾಮತೀರ್ಥ, ಸೋಮನಿಂಗ ಗುಡ್ಡಾಪುರ, ವಿಠ್ಠಲ ಸಿರಿಗಿರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net