ನ್ಯಾಯಾಲಯಕ್ಕೆ ಕಟ್ಟಡ ವ್ಯವಸ್ಥೆ ಮಾಡಿ

31 kmp 01
ಕಂಪ್ಲಿ ತಹಸೀಲ್ದಾರ್ ಎಸ್.ಶಿವರಾಜಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸಿ.ಎ.ಚನ್ನಪ್ಪ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಪಿ.ಸಂತೋಷಕುಮಾರ್. ಜಿ.ಸೋಮನಗೌಡ, ಎಸ್.ಎನ್.ಭೀಮರಾವ್, ಎಚ್.ಸೋಮಪ್ಪ, ಎಂ.ಹನುಮಂತ ಇತರರಿದ್ದರು.
Published on

ಕಂಪ್ಲಿ: ತಾಲೂಕು ಕೇಂದ್ರ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಎಸ್.ಶಿವರಾಜಗೆ ಇಲ್ಲಿನ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಶನಿವಾರ ಮನವಿ ಸಲ್ಲಿಸಿದರು.

ಸಂಘದ ನಗರ ಅಧ್ಯಕ್ಷ ಸಿ.ಎ.ಚನ್ನಪ್ಪ ಮಾತನಾಡಿ, ಕಂಪ್ಲಿ ತಾಲೂಕು ಕೇಂದ್ರವಾಗಿ ಏಳು ವರ್ಷಗಳಾದರೂ ತಾಲೂಕು ಮಟ್ಟದ ಕಚೇರಿಗಳು ಆರಂಭಗೊಂಡಿಲ್ಲ. ಇದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಸಾಕಷ್ಟು ಸೌಲಭ್ಯಗಳಿಗಾಗಿ ಬಳ್ಳಾರಿಗೆ ತೆರಳಬೇಕಿದೆ.

ಪಟ್ಟಣದಲ್ಲಿ ತುರ್ತಾಗಿ ತಾಲೂಕು ಕ್ರೀಡಾಂಗಣ, ಅಗ್ನಿಶಾಮಕದಳ, ಬಸ್ ಡಿಪೋ ತೆರೆಯಬೇಕಿದೆ. ನ್ಯಾಯಾಲಯ ತೆರೆಯುವಂತೆ ಮಂಜೂರಾತಿ ದೊರೆತಿದ್ದು, ಕಟ್ಟಡ ದೊರಕದ ಕಾರಣ ನ್ಯಾಯಾಲಯ ಆರಂಭಗೊಂಡಿಲ್ಲ.

ಕೂಡಲೇ ನ್ಯಾಯಾಲಯ ಆರಂಭಕ್ಕೆ ಕಟ್ಟಡದ ವ್ಯವಸ್ಥೆ ಒದಗಿಸಬೇಕಿದೆ. ಗಂಗಾವತಿ, ಹೊಸಪೇಟೆಯಿಂದ ರಾತ್ರಿ ವೇಳೆ ಕಡೇಬಾಗಿಲು ಮೂಲಕ ಬಸ್‌ಗಳು ಸಂಚರಿಸುವುದನ್ನು ತಪ್ಪಿಸಿ, ಕಂಪ್ಲಿ ಮೂಲಕ ತೆರಳುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳಾದ ಪಿ.ಸಂತೋಷಕುಮಾರ್, ಪ್ರಮುಖರಾದ ಎಂ.ಎಸ್.ಮಹೇಂದ್ರ ತೇಜ, ವಿ.ಬಿ.ಗಣೇಶ, ಎನ್.ಮೋಹನ್, ಎಚ್.ಬಸವರಾಜ, ಎಚ್.ಮಾದೇಶ, ಎಚ್.ಉದಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net