

ಹಾನಗಲ್ಲ: ಬೈಕ್ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ತಾಲೂಕಿನ ಕಾಮನಹಳ್ಳಿ ಬಳಿ ಸೋಮವಾರ ನಡೆದಿದೆ.
ಪಟ್ಟಣದ ನವನಗರದ ಮಹ್ಮದಜಾಫರ ಅಪ್ತಾಫಅಹ್ಮದ್ ನಾಗರವಳ್ಳಿ ಮೃತ ವ್ಯಕ್ತಿ.
ಈತ ಬೈಕ್ ತೆರಳುತ್ತಿದ್ದ ಸಮಯದಲ್ಲಿ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ಮಹ್ಮದಜಾಫರ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.