

ಬ್ಯಾಡಗಿ: ಬೈಕ್ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಕೊಲ್ಲಾಪುರ ಕ್ರಾಸ್ ಬಳಿ ಗುರುವಾರ ನಡೆದಿದೆ.
ತಾಲೂಕಿನ ಆಣೂರ ಗ್ರಾಮದ ನಾಗರಾಜ ಬಸವಣ್ಣೆಪ್ಪ ಗಾಣಿಗೇರ ಮೃತ ಬೈಕ್ ಸವಾರ.
ಇವರು ಬೈಕ್ ಮೇಲೆ ಬರುತ್ತಿದ್ದ ಸಮಯದಲ್ಲಿ ಎದುರಿಗೆ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಇದರಿಂದ ನಾಗರಾಜ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.