

ನಂದೇಶ್ವರ: ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸಧೃಢವಾಗುತ್ತದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಸಮೀಪದ ಸತ್ತಿ ಗ್ರಾಮದ ದರ್ಗಾ ಆವರಣದಲ್ಲಿ ಬುರಾನಸಾಹೇಬರ ಉರುಸ್ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯ ಮೈದಾನ ಪೂಜೆ ನೆರವೇರಿಸಿ ಮಾತನಾಡಿ, ದರ್ಗಾ ಆವರಣದಲ್ಲಿರುವ ಬುರಾನಸಾಹೇಬರ ಮಂದಿರ ಹಾಗೂ ಬ್ರಹ್ಮ ದೇವರ ಗುಡಿ ಗ್ರಾಮದ ಭಾವೈಕ್ಯಕ್ಕೆ ಸಾಕ್ಷಿ ಎಂದರು.
ನೂರಕ್ಕೂ ಅಧಿಕ ಫೈಲ್ವಾನರು ಕುಸ್ತಿಯಲ್ಲಿ ಭಾಗವಹಿಸಿದ್ದರು.
ಚಿಕ್ಕ ಪಡಸಲಗಿಯ ಶಿವರುದ್ರಯ್ಯ ಬಬಲಾದಿಮಠ ನೇತೃತ್ವ, ಷಣ್ಮುಖಯ್ಯ ಬಬಲಾದಿಮಠ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ದಾದಾಗೌಡ ಪಾಟೀಲ, ಪರಪ್ಪ ಚಮಕೇರಿ, ಜಡೆಪ್ಪ ಕುಂಬಾರ, ಉದ್ಯಮಿ ಪುಂಡಲೀಕ ಗಾಣಿಗೇರ, ಪ್ರಮೋದ ಹಳೆಮನಿ, ಹನುಮಂತ ಲಿಂಗರೆಡ್ದಿ, ಮಲ್ಲಪ್ಪ ಬ್ಯಾಳಗೌಡರ, ಪ್ರಕಾಶ ಭೂಷಣ್ಣವರ, ಬಾಬಾಜಾನ ಮಕಾಂದಾರ, ಪ್ರಕಾಶ ಸನದಿ, ಸಂಜೀವ ಗಡ್ಯಾಗೋಳ, ಸಂಜೀವ ಜಮಖಂಡಿ, ಫೈರೋಜ್ ಅತ್ತಾರ, ಮೋಹನ ದೊಡಮನಿ, ಬಸವರಾಜ ದಳವಾಯಿ, ಸಲೀಂ ಪುಣೇಕರ ಇತರರಿದ್ದರು.