ಕವಿಯಾಗಲು ಬೇಕು ಅನುಭವದೊಂದಿಗೆ ಸೃಜನಶೀಲತೆ

kota-2
Published on

ಕೋಟ: ಅತಿ ಕಡಿಮೆ ಶಬ್ದಗಳ ಮೂಲಕ ಧ್ವನಿ ಪೂರ್ಣವಾಗಿ ಕಟ್ಟುವುದೇ ಕವಿತೆ. ಅನುಕರಣೆ ಮಿತಿಯನ್ನು ಮೀರಿ, ಅನುಭವದೊಂದಿಗೆ ಸೃಜನಶೀಲತೆ ಸಾಧಿಸಲು ಕವಿ ಪ್ರಯತ್ನಿಸಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.

ಕೋಟ ಸು.ವಿ.ಕಾ. ಸಾಂಸ್ಕೃತಿಕ ಸಂಘಟನೆಯು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ ಸಹಯೋಗದೊಂದಿಗೆ ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಆಯೋಜಿಸಿದ ಉಡುಪಿ ಜಿಲ್ಲಾಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಪುಸ್ತಕ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಪನ್ಯಾಸಕ ಸುಜಯೀಂದ್ರ ಹಂದೆ ಸಂಪಾದಿತ ಕಾಲೇಜು ವಿದ್ಯಾರ್ಥಿಗಳ ಕವನ ಸಂಕಲನ ‘ನನೆ ಮೊಗ್ಗು’ ಕೃತಿಯನ್ನು ಕವಯತ್ರಿ ಚಿತ್ರಪಾಡಿ ಸುಮನಾ ಆರ್. ಹೇರ್ಳೆ ಅನಾವರಣಗೊಳಿಸಿದರು. ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ ಅಧ್ಯಕ್ಷತೆ ವಹಿಸಿದ್ದರು. ಅಂತಾರಾಷ್ಟ್ರಿಯ ಫಾರ್ಮಾಸುಟಿಕಲ್ ಸಂಸ್ಥೆಗಳ ಗುಣಮಟ್ಟ ನಿಯಂತ್ರಣ ಸಲಹೆಗಾರ ಡಾ.ವೆಂಕಟಕೃಷ್ಣ ಕೆ., ಸಾಹಿತಿ ಜನಾರ್ದನ ಹಂದೆ ಉಪಸ್ಥಿತರಿದ್ದರು. ಉಡುಪಿ ನೇತ್ರಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಐಶ್ವರ್ಯಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರು 23 ವಿದ್ಯಾರ್ಥಿಗಳು ಕವಿತಾ ವಾಚನ ಮಾಡಿದರು. ಸಂಘಟನೆ ಕಾರ್ಯದರ್ಶಿ ವಿನಿತಾ ಎಸ್. ವಂದಿಸಿದರು. ಕಾವ್ಯ ಎಚ್. ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net