ಸಂಸಾರದಲ್ಲಿದ್ದು ನಿರ್ಲಿಪ್ತನಾಗಿರುವುದೇ ಮೋಕ್ಷ

25 KMP 06
ಕಂಪ್ಲಿಯಲ್ಲಿ ಆಯೋಜಿಸಿದ್ದ ಮಹಾಮನೆ ಕಾರ್ಯಕ್ರಮವನ್ನು ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಉದ್ಘಾಟಿಸಿದರು. ಪ್ರಮುಖರಾದ ತೆಂಗಿನಕಾಯಿ ತಿಪ್ಪೇಸ್ವಾಮಿ, ಆಶೋಕ ಕುಕನೂರು, ಬಿ.ಎಂ.ರುದ್ರಯ್ಯ, ಎಚ್.ನಾಗರಾಜ, ಬಿ.ಹುಸೇನ್‌ಸಾಬ್, ಸೋಗಿ ಸಂತೋಷ್, ಎಸ್.ಸುಬ್ಬಣ್ಣ, ಸಜ್ಜೇದ ವಿರಭದ್ರಪ್ಪ, ಗಡಾದ ಸಿದ್ರಾಮಪ್ಪ, ಕೆ.ಯಂಕಾರೆಡ್ಡಿ ಸೇರಿ ಇತರರಿದ್ದರು.
Published on

ಕಂಪ್ಲಿ: ಶರಣರ ದೃಷ್ಟಿಯಲ್ಲಿ ಮೋಕ್ಷ ಎಂಬುದೇ ಇಲ್ಲ. ಸಂಸಾರದಲ್ಲಿದ್ದು ನಿರ್ಲಿಪ್ತನಾಗಿರುವುದೇ ನಿಜವಾದ ಮೋಕ್ಷ ಎಂದು ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಹೇಳಿದರು.

ಪಟ್ಟಣದ ತೆಂಗಿನಕಾಯಿ ವಠಾರದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡ ತೆಂಗಿನಕಾಯಿ ದೊಡ್ಡ ರುದ್ರಪ್ಪ ಜ್ಞಾನದಾಸೋಹದಡಿ ಮಹಾಮನೆ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು.

ಮರಣವೇ ಮಹಾನವಮಿ ಉಪನ್ಯಾಸ ನೀಡಿ ಸ್ವರ್ಗ, ನರಕ, ವೈಕುಂಠ, ಕೈಲಾಸ ಎಂಬುವು ಕಾಲ್ಪನಿಕವಾಗಿದ್ದು ವಾಸ್ತವವಾಗಿಲ್ಲ. ಶರಣರು ಮರಣವನ್ನು ಸಹಜ ಪ್ರವೃತ್ತಿಯಾಗಿ ಪರಿಗಣಿಸಿದ್ದರು ಎಂದರು.

ಪರಿಷತ್ ಅಧ್ಯಕ್ಷ ಜಿ.ಪ್ರಕಾಶ ಅಧ್ಯಕ್ಷತೆವಹಿಸಿ ಮಾತನಾಡಿ, ಶರಣರು ಮರಣವನ್ನು ಮಹಾನವಮಿ ಎಂದೇ ಸಂಭ್ರಮಿಸಿದ್ದಾರೆ. ದೇಹಕ್ಕೆ ಮರಣವೇ ಹೊರತು ಆತ್ಮಕ್ಕಲ್ಲ. ಪುನರ್ಜನ್ಮ ಪೂರ್ವಜನ್ಮ ಎಂದು ಜಪಿಸುವ ಬದಲಿಗೆ ಇದೇ ಜನ್ಮದಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕಿದೆ ಎಂದರು.

ಗಂಗಾವತಿಯ ವರ್ತಕ ತೆಂಗಿನಕಾಯಿ ಸಣ್ಣರುದ್ರಪ್ಪ, ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ, ವೀರಶೈವಸಂಘದ ಮುಖಂಡ ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಅಕ್ಕಮಹಾದೇವಿ ಮಹಿಳಾಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಗಂಗಾವತಿ ರಾಷ್ಟ್ರಿಯ ಬಸವದಳದ ಅಧ್ಯಕ್ಷ ಕೆ.ಪೊಂಪಣ್ಣ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net