ಜನಪ್ರತಿನಿಧಿಯಾಗಿರಲು ಪಾಟೀಲ ಲಾಯಕ್ಕಲ್ಲ

web5
ಹಿರೇಬಾಗೇವಾಡಿ ಉಪತಹಸೀಲ್ದಾರ್ ಕಚೇರಿ ಎದುರು ರೈತರ ಕುರಿತಾದ ಸಚಿವ ಶಿವಾನಂದ ಪಾಟೀಲ ಹೇಳಿಕೆ ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು. ಬಸವಣ್ಣೆಪ್ಪ ಗಾಣಗಿ, ಬಾಪು ನಾವಲಗಟ್ಟಿ, ಯಲ್ಲಪ್ಪ ಧರೆಣ್ಣವರ, ದಯಾನಂದ ಹಂಚಿನಮನಿ ಇತರರು ಇದ್ದರು.
Published on

ಹಿರೇಬಾಗೇವಾಡಿ: ಸಚಿವ ಶಿವಾನಂದ ಪಾಟೀಲ ರೈತರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಪತಹಸೀಲ್ದಾರ್ ಕಚೇರಿ ಎದುರು ರೈತರು ಮಂಗಳವಾರ ಪ್ರತಿಭಟಿಸಿದರು.

ಪ್ರಗತಿಪರ ರೈತ ಬಸವಣ್ಣೆಪ್ಪ ಗಾಣಗಿ ಮಾತನಾಡಿ, ರೈತ ದೇಶದ ಬೆನ್ನೆಲುಬು ಎಂದೆಲ್ಲ ಹೇಳಿ ನಮ್ಮಿಂದ ಮತ ಪಡೆದು ಚುನಾಯಿತರಾದ ಸಚಿವ ಪಾಟೀಲ ಹಗುರವಾಗಿ ಮಾತನಾಡಿ ಸಣ್ಣತನ ಮೆರೆದಿದ್ದಾರೆ. ಅಂಥವರನ್ನು
ಅಧಿಕಾರದಿಂದ ಕೆಳಗಿಳಿಸಬೇಕು. ಅವರು ಜನಪ್ರತಿನಿಧಿಯಾಗಿರಲು ಲಾಯಕ್ಕಲ್ಲ ಎಂದರು. ರೈತರು ಸಚಿವರ ವಿರುದ್ಧ ಘೋಷಣೆ ಕೂಗಿದರು. ಸಮಾಜ ಸೇವಕ ಬಾಪು ನಾವಲಗಟ್ಟಿ ಮಾತನಾಡಿದರು.

ಅಖಂಡ ಕರ್ನಾಟಕ ರೈತ ಸಂಘದ ಬೆಳಗಾವಿ ತಾಲೂಕಾಧ್ಯಕ್ಷ ಬಸವರಾಜ ಡೊಂಗರಗಾವಿ, ಬಸವರಾಜ ಇಟಗಿ, ಬಸನಗೌಡ ದೊಡಗೌಡರ, ಯಲ್ಲಪ್ಪ ಧರೆಣ್ಣವರ, ವಿರೂಪಾಕ್ಷಿ ರೊಟ್ಟಿ, ಬಸನಗೌಡ ಪಾಟೀಲ, ಪರಮೇಶ ಸಾಲಿಮನಿ, ಬಾಬು ಅರಳಿಕಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net