

ಮಧುಗಿರಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 75 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೆರದ ಪ್ರತೀ ಸರ್ಕಾರಿ ಕಚೇರಿಯ ಮೇಲೆ ತಿರಂಗಾ ಧ್ವಜ ಹಾರಾಡುತ್ತಿವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ಪಟ್ಟಣದ ಮಾಲೀಮರಿಯಪ್ಪ ರಂಗ ಮಂದಿರದಲ್ಲಿ ಶನಿವಾರ ಮಧುಗಿರಿ ವಿಕಾಸ ಸಮಿತಿ ಹಮ್ಮಿಕೊಂಡಿದ್ದ ತ್ರಿವರ್ಣ ಧ್ವಜ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕರೆಗೆ ಓಗೊಟ್ಟು ದೇಶದ ಮೂಲೆ ಮೂಲೆಯಲ್ಲೂ ತಿರಂಗಾ ಯಾತ್ರೆ ನಡೆಯುತ್ತಿದೆ. ಸ್ವಾತಂತ್ರ್ಯ ಸಂಭ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದರು.
ಬ್ರಿಟಿಷರ 200 ವರ್ಷಗಳ ಆಡಳಿತ ದಿಕ್ಕರಿಸಿ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಮಹಾತ್ಮ ಗಾಂಧಿ ಸ್ವಯಂಪ್ರೇರಿತರಾಗಿ ಹೋರಾಟಕ್ಕೆ ಇಳಿದರು. ಇನ್ವಿಲಾಬ್ ಜಿಂದಾಬಾದ್ ಎಂಬ ಒಂದೇ ಪದಕ್ಕೆ ಬ್ರಿಟಿಷರು ತತ್ತರಿಸಿದ್ದರು. ಬ್ರಿಟಿಷರ ದಬ್ಬಾಳಿಕೆಗೆ ಹೋರಾಟಗಾರರ ಕಿಚ್ಚು ಆರಲ್ಲಿ. ಈ ಹೋರಾಟದಲ್ಲಿ ಒಂದು ವರ್ಗದ ಕುಟುಂಬ ಭಾಗವಹಿಸಿರಲ್ಲಿ. ಇಡೀ ದೇಶಕ್ಕೆ ದೇಶವೇ ಹೋರಾಟ ಮಾಡಿದೆ. ಸ್ವಾತಂತ್ರ್ಯ ನಂತರ ಸರ್ದಾರ್ ವ್ಲಭಾಬಾಯಿ ಪಟೇಲ್ ದೇಶ ಒಗ್ಗೂಡಿಸಲು ದಿಟ್ಟ ತೀರ್ಮಾನ ಕೈಗೊಂಡರು ಎಂದು ಸ್ಮರಿಸಿದರು.
ಸಾವರ್ಕರ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರಂತಹ ಮಹನೀಯರರು ಹೋರಾಟಕ್ಕೆ ಜೀವ ತುಂಬಿದರು. ಆದರೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಕಾಂಗ್ರೆಸ್‌ನವರು ಟೀಕೆ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎ.ನವೀನ್ ಮಾತನಾಡಿ, ಮಧುಗಿರಿ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ದೇಶಭಕ್ತರ ಸಾಮ್ರಾಜ್ಯ ಆರಂಭವಾಗಲಿದೆ ಎಂದರು.
ದೇಶಭಕ್ತರ ಪಡೆ ನಿರ್ಮಾಣ: ಐತಿಹಾಸಿಕ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡ ಮಧುಗಿರಿಯ ಸಮಸ್ತ ನಾಗರಿಕರು, ಯುವಕರು, ಮಹಿಳೆಯರು ಎ್ಲರಿಗೂ ಮಾದರಿಯಾಗಿದ್ದು, ಯುವಕರು ಬದಲಾವಣೆ ಬಯಸಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಬದಲಾವಣೆಯ ಗಾಳಿ ಬೀಸುತ್ತಿದೆ, ಮಧುಗಿರಿಯ ಪ್ಲಕ್ಕಿ ಹೊರಲು ತಯಾರಾಗಿದ್ದು, ದೇಶಭಕ್ತರ ಪಡೆ ನಿರ್ಮಾಣವಾಗಿದೆ ಎಂದು ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ಹೇಳಿದರು.
ಧ್ವಜ ಯಾತ್ರೆಗೆ ಕಲಾ ಮೆರುಗು
ಮಧುಗಿರಿಯ ಐತಿಹಾಸಿಕ ಶಿರಾಗೇಟ್ ಬಳಿರುವ ದಂಡೂರ ಬಾಗಿಲಿನಿಂದ ತಿರಂಗ ಧ್ವಜ ಯಾತ್ರೆ ಪ್ರಾರಂಭಗೊಂಡು ಪಟ್ಟಣದ ವಿವಿಧ ಬೀದಿಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಸಂಚರಿಸಿ ಮಾಲಿಮರಿಯಪ್ಪ ರಂಗಮಂದಿರದ ಬಳಿ ಸಂಪನ್ನಗೊಂಡಿತು. ಸ್ವಾತಂತ್ರ್ಯ ಹೋರಾಟಗಾರರಾದ ಶಂಕರಪ್ಪ(96), ಶಿವಕುಮಾರ್(87)ಅವರನ್ನು ಸನ್ಮಾನಿಸಲಾತು. ಮಾಜಿ ಶಾಸಕರಾದ ಗಂಗಹನುಮಯ್ಯ, ಎಸ್‌ಸಿ ಮೋರ್ಚಾ ಅಧ್ಯಕ್ಷ ಮಾರುತಿ ಗಂಗಹನುಮಯ್ಯ, ಪದಾಧಿಕಾರಿಗಳಾದ ಪಾವಗಡ ರವಿಕುಮಾರ್, ಜಯಣ್ಣ, ಕಂಬದರಂಗಯ್ಯ, ಮಾಲಿ ಭರತ್, ಸುರೇಶ್, ಲಕ್ಷ್ಮಿ ಪ್ರಕಾಶ್, ಕಲ್ಪೃನಾ ಗೋವಿಂದರಾಜು, ಕಾರ್ತಿಕ್ ಆರಾಧ್ಯ ಇತರರಿದ್ದರು.
ಮಧುಗಿರಿ ಜನತೆಗೆ ಸ್ವಾತಂತ್ರ್ಯದ ಅಮೃತ ಉಣಬಡಿಸಿದ ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡರ ಶ್ರಮ ಸಾರ್ಥಕವಾಗಿದ್ದು, ಮಧುಗಿರಿಯಲ್ಲಿನ ಅಮೃತ ಮಹೋತ್ಸವ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ.
-ಚಿದಾನಂದ ಎಂ.ಗೌಡ ಎಂಎಲ್‌ಸಿ