ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ 9.84 ಲಕ್ಷ ರೂ. ವಂಚನೆ

22
Published on

ಹಾವೇರಿ: ಎಲೆಕ್ಟ್ರಾನಿಕ್ ಗೂಡ್ಸ್ ಸೇಲಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಡಬಲ್ ಲಾಭ ನೀಡುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಬರೋಬ್ಬರಿ 9.84 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಲತಾ ಪಾಟೀಲ (31) ಮೋಸ ಹೋದವರು.
ಇವರಿಗೆ ಅಣ್ಣಯ್ಯ ಪಟೇಲ್ ಎಂಬ ಹೆಸರಿನ ವ್ಯಕ್ತಿ ಫೋನ್ ಮಾಡಿ ಎಲೆಕ್ಟ್ರಾನಿಕ್ ಗೂಡ್ಸ್ ಸೇಲಿಂಗ್‌ನಲ್ಲಿ ಹೂಡಿಕೆ ಮಾಡಿದರೆ 1 ಸಾವಿರ ರೂ.ಗೆ 2 ಸಾವಿರ ರೂ. ಬರಲಿದೆ ಎಂದು ನಂಬಿಸಿದ್ದಾನೆ. ನಂತರ ವಿವಿಧ ಲಿಂಕ್‌ಗಳನ್ನು ಕಳುಹಿಸಿ ಲತಾ ಅವರ ಬ್ಯಾಂಕ್ ಖಾತೆಯಿಂದ 9.84 ಲಕ್ಷ ರೂ. ಹಾಕಿಸಿಕೊಂಡು ವಾಪಸ್ ಹಣ ನೀಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net