

ಸಿದ್ದಾಪುರ: ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ಸಿದ್ದಾಪುರ(ಟಿಎಂಎಸ್) ಇದರ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಸನ್ಮಾನ ಆ. 23ರಂದು ಮಧ್ಯಾಹ್ನ 3ಕ್ಕೆ ಸಂಘದ ವ್ಯಾಪಾರಾಂಗಣದಲ್ಲಿ ಸಂಘದ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ನಂತರ ಖ್ಯಾತ ಕಲಾವಿದರಿಂದ ಜಾಂಬವತಿ ಪರಿಣಯ ಯಕ್ಷಗಾನ ತಾಳಮದ್ದಳೆ ಆಯೋಜನೆಗೊಂಡಿದೆ. ಹಿಮ್ಮೆಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೕಶ್ವರ ಕೆಸರಕೊಪ್ಪ, ಮುಮ್ಮೇಳದಲ್ಲಿ ಜಬ್ಬರ್ ಸಮೋ, ಗ.ನಾ. ಭಟ್ಟ ಮೈಸೂರು, ಗಣರಾಜ ಕುಂಬ್ಳೆ, ಗಣಪತಿ ಹೆಗಡೆ ಗುಂಜಗೋಡ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.