ಟಿಎಂಸಿಸಿನಿಂದ ವಿದ್ಯಾರ್ಥಿಗಳಿಗೆ ಸಹಕಾರ

FotoJet
Published on

 ಗುಬ್ಬಿ : ಸಹಾಯ ಸಹಕಾರ ತತ್ವದ ನೆಲೆಗಟ್ಟಿನಲ್ಲಿ ಸುಭದ್ರ ಸಮಾಜವನ್ನು ನಿಮಾರ್ಣ ಮಾಡುವ ಗುರಿ ಹೊಂದಿದ್ದು, ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಟಿಎಂಸಿಸಿ ಬ್ಯಾಂಕ್​ ಆತ್ಮವಿಶ್ವಾಸದ ಬಲ ತುಂಬಲಾಗುತ್ತಿದೆ ಎಂದು ನಿರ್ದೇಶಕ ಡಿ.ಎ.ಮೋಹನ್​ ತಿಳಿಸಿದರು.

ತಾಲೂಕಿನ ಕೆ.ಮತ್ತಿಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಟಿಎಂಸಿಸಿ ಸೊಸೈಟಿ (ತುಮಕೂರು ಮರ್ಚೆಂಟ್ಸ್​ ಕ್ರೆಡಿಟ್​ ಕೋ ಆಪರೇಟಿವ್​)ಯಿಂದ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ಕಳಕಳಿ ಮತ್ತು ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ನಿಮಾರ್ಣವೇ ನಮ್ಮ ಗುರಿ ಎಂದರು.

ಪ್ರಾಂಶುಪಾಲ ಎಸ್​.ಪ್ರಭಾಕರ್​ ಮಾತನಾಡಿದರು. ಟಿಎಂಸಿಸಿಯ ನಿರ್ದೇಶಕ ಗಂಗಾಧರ್​ ಶೆಟ್ಟಿ, ನಾಗರಾಜ್​ ಗುಪ್ತ, ಉಪನ್ಯಾಸಕರಾದ ವಾಸುದೇವರಾಜ್​, ಟಿ.ಆರ್​.ತಿಮ್ಮರಾಜು, ಬಿ.ಸಿ.ಷಣ್ಮುಖ, ಎ.ಸಿ.ಶಿವಣ್ಣ, ಗುರುಪ್ರಸಾದ್​, ಅಶೋಕ್​ ಪವರ್​, ರೂಪಶ್ರೀ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net