ಟೈಟಾನ್ಸ್, ಫೈನಲ್ ಬಿಸಿಎ ತಂಡಕ್ಕೆ ಗೆಲುವು

ಟೈಟಾನ್ಸ್, ಫೈನಲ್ ಬಿಸಿಎ ತಂಡಕ್ಕೆ ಗೆಲುವು
Published on

ವಿರಾಜಪೇಟೆ: ಸೆಂಟ್ ಆನ್ಸ್ ಪದವಿ ಕಾಲೇಜಿನ ಅಂತಿಮ ಬಿಸಿಎ ವಿದ್ಯಾರ್ಥಿಗಳು ಆಯೋಜಿಸಿದ್ದ ಆನ್ಸ್ ಪ್ರೀಮಿಯರ್ ಲೀಗ್ ಅಂತರ್ ತರಗತಿ ಕ್ರಿಕೆಟ್ ಕ್ರೀಡಾಕೂಟದಲ್ಲಿ ಟೈಟಾನ್ಸ್ ತಂಡವು ಸ್ಪಾರ್ಟನ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಒಟ್ಟು ಎಂಟು ತಂಡಗಳು ಭಾಗವಹಿಸಿದ್ದು, ಉಪನ್ಯಾಸಕರೇ ತಂಡವನ್ನು ನಿರ್ವಹಿಸಿದರು.

ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ 11 ತಂಡಗಳು ಭಾಗವಹಿಸಿದ್ದು, ಫೈನಲ್ ಬಿಸಿಎ ತಂಡ ಗೆಲುವು ಸಾಧಿಸಿ, ಫೈನಲ್ ಬಿಬಿಎ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿತು.

ಕ್ರೀಡಾಕೂಟವನ್ನು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಐಸಾಕ್ ರತ್ನಾಕರ್ ಉದ್ಘಾಟಿಸಿದರು. ಪದವಿ ಕಾಲೇಜು ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಹಿತವಚನ ನೀಡಿದರು.

ಮಾರೋಪ: ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್, ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮಾ, ಸಹಾಯಕ ಧರ್ಮಗುರು ಚಾರ್ಲ್ಸ್, ಬಿಸಿಎ ವಿಭಾಗದ ಮುಖ್ಯಸ್ಥೆ ಸೌಮ್ಯಾ ಸೋಮರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಬಿ.ವಿ. ರಾಜ ರೈ ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾಟದ ಸಂಯೋಜಕರಾದ ಇಂದು, ಕಾವೇರಮ್ಮ, ತರುಣ್, ಸೌರವ್ ದಾಸ್, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net