

ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಕುಸುಗಲ್ ರಸ್ತೆಯ ವಜ್ರ ಟಾವರ್ಸ್‌ನಲ್ಲಿ ಟೈಟನ್ ವರ್ಲ್ಡ್ ಮಳಿಗೆಯನ್ನು ಟೈಟನ್ ಕಂಪನಿ ರೀಜನಲ್ ಬಿಜಿನೆಸ್ ಮ್ಯಾನೇಜರ್ ಪ್ರಶಾಂತ ಜೆ. ಗುರುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಪ್ರಶಾಂತ ಜೆ., ವಿಶ್ವ ಮಟ್ಟದಲ್ಲಿ ಟೈಟನ್ ವಾಚ್ ಕಂಪನಿ ಹೆಸರು ವಾಸಿಯಾಗಿದೆ. ತನ್ನದೇ ಆದ ಗ್ರಾಹಕರ ಸಂಖ್ಯೆಯನ್ನು ಹೊಂದಿದೆ. ಈ ಮಳಿಗೆ ಆರಂಭವಾಗಿರುವುದರಿಂದ ಮತ್ತಷ್ಟು ಗ್ರಾಹಕ ಸ್ನೇಹಿಯಾಗಿರಲಿದೆ ಎಂದರು.
ಟೈಟನ್ ವರ್ಲ್ಡ್ ಫ್ರಾಂಚೈಸಿ ಪಾಲುದಾರ ಪ್ರೀತೇಶ ಚೌಧರಿ ಮಾತನಾಡಿ, ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿ ಇಂಥ ಮಳಿಗೆ ಆರಂಭವಾಗಿರುವುದು ನಮ್ಮ ಅದೃಷ್ಟ. ಈ ಭಾಗದ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಜಾಗತಿಕ ಮನ್ನಣೆ ಗಳಿಸಿರುವ ಈ ವಾಚ್ ಕಂಪನಿಯು ಗ್ರಾಹಕರ ಮೆಚ್ಚುಗೆ ಪಡೆದಿದೆ ಎಂದರು.
ಉದ್ಘಾಟನೆ ನಿಮಿತ್ತ ಕೆಲ ವಾಚ್‌ಗಳಿಗೆ ಶೇ. 30ರಷ್ಟು ರಿಯಾಯಿತಿ ನೀಡಲಾಗಿದೆ. ವಾಚ್ ಸರ್ವಿಸ್ ಉಚಿತವಾಗಿದೆ. ಕಾರವಾರ ಮತ್ತು ಹುಬ್ಬಳ್ಳಿಯಲ್ಲಿ ಫ್ರಾಂಚೈಸಿ ಆರಂಭಿಸಿದ್ದು, ಇನ್ನಷ್ಟು ವಿಸ್ತರಣೆ ಆಗಲಿದೆ. ಟಾಮಿ ಹಿಲ್ ಫಿಗರ್, ಪೊಲೀಸ್, ಕೆನಿತ್‌ಕೋಲ್, ಅನ್ನೆ ಕೆಲಿನ್, ರಾಗಾ ಸೇರಿ ವಿವಿಧ ರೀತಿಯ ವಾಚ್‌ಗಳಿವೆ ಎಂದರು.
ಮತ್ತೊಬ್ಬ ರೀಜನಲ್ ಬಿಜಿನೆಸ್ ಮ್ಯಾನೇಜರ್ ಅರುಣ ಪ್ರಸಾದ ಮಾತನಾಡಿದರು.
ಪ್ರಿಯಾಂಕಾ ಚೌಧರಿ, ಇತರರು ಇದ್ದರು.