

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲನ ಮಂಜುನಾಥರಡ್ಡಿ ಹಾಗೂ ನಾರಾಯಣರಡ್ಡಿ ಕಿರೇಸೂರ ಸಹೋದರರ ನೇತೃತ್ವದಲ್ಲಿ ಕೈಗೊಂಡಿರುವ ತಿರುಪತಿ ಪಾದಯಾತ್ರೆ ಧಾರವಾಡ ಜಿಲ್ಲೆ ದಾಟಿ ಹಾವೇರಿ ಜಿಲ್ಲೆಯಲ್ಲಿ ಮುಂದುವರಿದಿದೆ.
ಇದಲ್ಲದೇ ಜಿಲ್ಲೆಯ ವಿವಿಧ ಕಡೆಗಳಿಂದ ಇನ್ನೂ ಕೆಲವರು ಇವರ ಜತೆಗೂಡಿದ್ದಾರೆ.
ಪಾದಯಾತ್ರೆ ಪ್ರಾರಂಭವಾದಾಗಿನಿಂದ ಇವರೊಂದಿಗೆ ಅಪರಿಚಿತ ಶ್ವಾನವೊಂದು ಜತೆಗೆ ಹೆಜ್ಜೆ ಹಾಕುತ್ತಿದೆ.
ಇದು ಎಲ್ಲಿಯದು, ಯಾರಿಗೆ ಸೇರಿದ್ದು ಎಂಬುದು ಗೊತ್ತಿಲ್ಲ. ಆದರೂ ಇವರನ್ನು ಬಿಟ್ಟು ಎಲ್ಲಿಯೂ ಹೋಗುತ್ತಿಲ್ಲ. ಶ್ವಾನದ ಭಕ್ತಿ, ಶ್ರದ್ಧೆ ಕಂಡು ಸ್ಥಳಿಯರು, ಪಾದಯಾತ್ರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರಾಣೆಬೆನ್ನೂರಲ್ಲಿ ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ಕದರಮಂಡಲಗಿ ದೇವಸ್ಥಾನದವರು ಶ್ವಾನಕ್ಕೂ ಗೌರವ ಸಲ್ಲಿಸಿದರು ಎಂದು ಪಾದಯಾತ್ರಿಗಳು ತಿಳಿಸಿದ್ದಾರೆ.
ಇವರೆಲ್ಲರು ಡಿ. 23ರಂದು ವೈಕುಂಠ ಏಕಾದಶಿಯಂದು ಶ್ರೀಹರಿ ವೆಂಕಟೇಶ್ವರನ ದರ್ಶನ ಪಡೆಯಲಿದ್ದಾರೆ.