ತಿರುಪತಿಯ ಉತ್ಸವ ಮೂರ್ತಿಗಳ ಆಗಮನ 31ರಂದು

tirupati
Published on

ಹುಬ್ಬಳ್ಳಿ: ಅಸಂಖ್ಯಭಕ್ತರ ಆರಾಧ್ಯ ದೈವವಾದ ತಿರುಪತಿ ತಿರುಮಲದ ಶ್ರೀದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರ ಉತ್ಸವ ಮೂರ್ತಿಗಳು ಜು. 31ರಂದು ನಗರಕ್ಕೆ ಆಗಮಿಸಲಿದೆ.

ಅಂದು ಸಂಜೆ 4.30 ಗಂಟೆಗೆ ಗೋಕುಲ ರಸ್ತೆ ಕೋಟಿಲಿಂಗೇಶ್ವರ ನಗರ ಕೇಶವಕುಂಜದಿಂದ ವಾಸವಿ ಕಲ್ಯಾಣ ಮಂಟಪದವರೆಗೆ ವಿಜೃಂಭಣೆಯಿಂದ ಉತ್ಸವಮೂರ್ತಿಗಳ ಮೆರವಣಿಗೆ ನಡೆಯಲಿದೆ. ಪೂರ್ಣ ಕುಂಭ ಮತ್ತು ಸಕಲ ವಾದ್ಯ ವೈಭವಗಳೊಂದಿಗೆ ಬರಮಾಡಿಕೊಳ್ಳಲಾಗುವುದು.

ಆಗಸ್ಟ್ 1ರಂದು ಬೆಳಗ್ಗೆ 7ರಿಂದ ವಾಸವಿ ಕಲ್ಯಾಣ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ತಿರುಮಲ ದೇವಸ್ಥಾನದಲ್ಲಿನ ಯಥಾವಿಧಿಯಂತೆ ಸುಪ್ರಭಾತ, ತೋಮಲ ಸೇವೆ, ಪುಷ್ಪಾರ್ಚನೆ, ಆರತಿ, ಸೇರಿ ವಿವಿಧ ಸೇವೆಗಳು ನಡೆಯಲಿವೆ. ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್​ನ ವಿಶೇಷಾಧಿಕಾರಿ ಆನಂದತೀರ್ಥಾಚಾರ್ಯ ಪಗಡಾಲ ನೇತೃತ್ವದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿವೆ.

ಬಳಿಕ ಖ್ಯಾತ ಹಿಂದುಸ್ಥಾನಿ ಗಾಯಕರಾದ ಪ್ರಸನ್ನ ಗುಡಿ ಹಾಗೂ ಭಾರ್ಗವಿ ಗುಡಿ ದಾಸವಾಣಿ ಕಾರ್ಯಕ್ರಮ ನಡೆಸಿಕೊಡುವರು. ನಂತರ ಪ್ರಸಾದ ವಿತರಣೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ಟಿಟಿಡಿ ದಾಸ ಸಾಹಿತ್ಯ ಪ್ರಾಜೆಕ್ಟ್ ಸಂಚಾಲಕ ಗೋಪಾಲ ಕುಲಕರ್ಣಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net