

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ ಒಂದು ದಿನದ ಮುಂಚಿತವಾಗಿ ಬುಧವಾರ ತಿರುಪತಿಯಿಂದ ಟಿಟಿಡಿ ಉಪ ಇಒ ಎಂ.ಲೋಕನಾಥA ಅವರು ವೆಂಕಟೇಶ ದೇವರ ಶೇಷವಸ್ತವನ್ನು ಮಂತ್ರಾಲಯದ ದ್ವಾರಬಾಗಿಲಿನಿಂದ ಪೀಠಾಪತಿ ಶ್ರೀಸುಬುಧೇಂದ್ರ ತೀರ್ಥರು ಸ್ವಾಗತಿಸಿ ತಲೆಮೇಲೆ ಹೊತ್ತುಕೊಂಡು ಪ್ರಾಕಾರದಲ್ಲಿ ಪ್ರದಕ್ಷಿಣೆ ಮಾಡಿ ನಂತರ ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು.
ನಂತರ ಟಿಟಿಡಿ ಅಽಕಾರಿಗಳು ಶ್ರೀಮಠದ ಪೀಠಾಪತಿಗಳಿಗೆ ಶೇಷಢವಸö ಮತ್ತು ಪ್ರಸಾದವನ್ನು ಅರ್ಪಿಸಿದರು.
ನಂತರ ಮಹಾರಾಷ್ಟç ಮಹಾಲಕ್ಷಿ÷್ಮÃ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಆಗಮಿಸಿದ ಪ್ರಸಾದವನ್ನು ರಾಯರಿಗೆ ಸಮರ್ಪಪಿಸಿದರು.
ನಂತರ ಶ್ರೀಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರು ಅಶಿರ್ವಚನ ನೀಡಿ, ಕಲಿಯುಗದ ಕಾಮದೇನು ಕಲ್ಪವೃಕ್ಷ ಎಂದು ಕರೆಯಲು ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀರಾಯರ ವರ್ಧಂತಿ ಮಹೋತ್ಸವದ ನಿಮಿತ್ತ ವೆಂಕಟೇಶ ದೇವರ ಶೇಷವಸ್ತ ಸಮರ್ಪಣೆಯಂಥ ಕಾರ್ಯವನ್ನು ಕಳೆದ ಅನೇಕ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದು, ಟಿಟಿಡಿ ಈ ನಿಟ್ಟಿನಲ್ಲಿ ಮಂತ್ರಾಲಯ ಮಠದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ವೆಂಕಟೇಶ ದೇವರ ಅನುಗ್ರಹದಿಂದ ಜನಿಸಿದ ರಾಯರು ನೆಲೆ ನಿಂತಿರುವ ಮಂತ್ರಾಲಯ ಕ್ಷೇತ್ರದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆಗೆ ಪೂರಕವಾಗಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಟಿಟಿಡಿ ಉಪ ಇಒ ಎಂ.ಲೋಕನಾಥA ,ಪಂಡಿತಕೇಸರಿ ರಾಜ್ಯ ಎಸ್.ಗಿರಿ ಆಚಾರ್ಯ, ಎಎಒ ಮಾಧವ ಶೆಟ್ಟಿ, ಶ್ರೀಮಠದ ವ್ಯವಸ್ಥಾಪರಾದ ವೆಂಕಟೇಶ ಜೋಶಿ ಸೇರಿ ಅನೇಕರು ಇದ್ದರು.