ತಿರುಮಲಪುರ ಹಾಲು ಉತ್ಪಾದಕರ ಸಂಘಕ್ಕೆ 9.45 ಲಕ್ಷ ರೂ. ಲಾಭ

1 (1)
Published on

 ಬೈಲುಕುಪ್ಪೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಸೋಮವಾರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಆಯೋಜಿಸಲಾಗಿತ್ತು.

ಸಭೆ ಉದ್ಘಾಟಿಸಿ ಮಾತನಡಿದ ಸಂಘದ ಅಧ್ಯಕ್ಷ ರುದ್ರಸ್ವಾಮಿ, ಗ್ರಾಮದ ನಿವಾಸಿ ಮಂಜೇಶ್ ಅವರು ಕೆಲವು ವರ್ಷಗಳ ಹಿಂದೆ ಉಚಿತವಾಗಿ ನೀಡಿದ ಸಣ್ಣ ಕೊಠಡಿಯಲ್ಲಿ ಡೇರಿ ಪ್ರಾರಂಭವಯಿತು. ಆ ಬಳಿಕ ಸ್ವಂತ ಕಟ್ಟಡ ನಿರ್ಮಿಸಿಕೊಂಡು ಬಿಎಂಸಿ ಕೇಂದ್ರ ಸಹ ತೆರೆಯಲಾಯಿತು. ಇದೀಗ ಎಲ್ಲ ಸದಸ್ಯರ ಸಹಕಾರದಿಂದ ಈ ಬಾರಿ ಸಂಘ 9.45 ಲಕ್ಷ ರೂ. ಲಾಭದಲ್ಲಿದೆ ಎಂದು ತಿಳಿಸಿದರು.

ಸಂಘದ ಆಯವ್ಯಯ ಕುರಿತು ಮೈಮುಲ್ ವಿಸ್ತರಣಾಧಿಕಾರಿ ಕೆ.ಶ್ರೀಕಾಂತ್ ಸದಸ್ಯರಿಗೆ ಮಾಹಿತಿ ನೀಡಿದರು. ಬಳಿಕ ಸಂಘಕ್ಕೆ ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಾದ ರಾಜೇಗೌಡ, ಲೋಹಿತ್, ಸ್ವಾಮಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷೆ ಈಶ್ವರಿ, ನಿರ್ದೇಶಕರಾದ ಇಬ್ರಾಹಿಂ, ರಾಮೇಗೌಡ, ಮಹದೇವಪ್ಪ, ಶಿವಕುಮಾರ್, ಕಾಳಶೆಟ್ಟಿ, ಪರಮೇಶ್, ಭಾಗ್ಯಾ, ಅಶ್ವಿನಿ, ಸ್ವಾಮಿ ನಾಯಕ, ಬೈಲುಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯರಾದ ರಾಧಾರಾಜು, ಪದ್ಮಾ, ಮಾಜಿ ಸದಸ್ಯೆ ಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net