ಕುದುರೆ ಕಟ್ಟಿ ಹಾಕಲಿ ನೋಡೋಣ

IMG_20251009_140030.jpg
Published on

ರಮೇಶ ಕತ್ತಿ ಅಶ್ವಮೇಧ ಕುದುರೆ ಹೇಳಿಕೆಗೆ

ಬಾಲಚಂದ್ರ ಜಾರಕಿಹೊಳಿ ತಿರುಗೇಟು

ಬೆಳಗಾವಿ: ನಾವು ಕುದುರೆ ಹೂಡುತ್ತೇವೆ. ಅವರು ಹಿಡಿದು ಕಟ್ಟಿ ಹಾಕಲಿ ನೋಡೋಣ…
ಹೀಗಂತ ರಮೇಶ ಕತ್ತಿ ಅಶ್ವಮೇಧ ಯಾಗದ ಕುದುರೆ ಹೇಳಿಕೆಗೆ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ಚುನಾವಣೆಗೆ ತಮ್ಮ ಬೆಂಬಲಿತ ಸದಸ್ಯರ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ರಮೇಶ ಕತ್ತಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದರು.
ಚುನಾವಣೆ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ. ಅವರು ಕುದುರೆ ಕಟ್ಟಿ ಹಾಕುತ್ತೇನೆಂದರೆ ಕಟ್ಟಿ ಹಾಕಲಿ, ಅವರಿಗೆ ಬೇಡ ಎಂದವರು ಯಾರು?
ನಮ್ಮ ಕುದುರೆಯನ್ನು ಹೂಡುವ ಪ್ರಯತ್ನ ನಾವು ಮಾಡುತ್ತೇವೆ. ಅದನ್ನು ಕಟ್ಟುವ ಪ್ರಯತ್ನ ಅವರು ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ರಮೇಶ ಕತ್ತಿ ಹೇಳಿದ್ದೇನು: ಬುಧವಾರ ತಮ್ಮ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ್ದ ರಮೇಶ ಕತ್ತಿ ಮಾಧ್ಯಮಗಳ ಕೇಳಿದ್ದ ಜಾರಕಿಹೊಳಿಯವರ ಅಶ್ವಮೇಧ ಕುದುರೆ ಇಲ್ಲಿಯೂ ಕಟ್ಟಿ ಹಾಕುತ್ತಿರಾ ಎಂಬ ಪ್ರಶ್ನೆಗೆ, ಹುಕ್ಕೇರಿ ವಿದ್ಯುತ್ ಸಂಘದ ಚುನಾವಣೆಯಂತೆಯೇ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿಯೂ ನಾವು ಅಗ್ರೆಸಿವ್ ಆಗಿದ್ದೇವೆ.‌ಇಲ್ಲಿಯೂ ಆ ಕುದುರೆ ಕಟ್ಟಿ ಹಾಕುತ್ತೇವೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net