ಚಿಕ್ಕಟ್ಟೆ ಅಬ್ಬಿಯಲ್ಲಿ ತೀರ್ಥಸ್ನಾನ

11hos2p
ಚಿಕ್ಕಟ್ಟೆ ಅಬ್ಬಿಯಲ್ಲಿ ತೀರ್ಥಸ್ನಾನ ಮಾಡುತ್ತಿರುವ ಭಕ್ತರು.
Published on

ಹೊಸನಗರ: ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಪುರಾಣ ಪ್ರಸಿದ್ಧವಾದ ಚಿಕ್ಕಟ್ಟೆ ಅಬ್ಬಿ ಫಾಲ್ಸ್ನಲ್ಲಿ ಎಳ್ಳಮಾವಾಸ್ಯೆ ನಿಮಿತ್ತ ಭಕ್ತರು ತೀರ್ಥ ಸ್ನಾನ ಮಾಡಿದರು.

ದಟ್ಟ ಕಾನನದ ನಡುವೆ ಚಿಕ್ಕಟ್ಟೆ ಅಬ್ಬಿ ಇದ್ದು ಬಂಡೆಗಳ ನಡುವೆ ಬರುವ ನೀರು ಮೇಲಿಂದ ಸಿಂಚನ ಮಾಡುತ್ತದೆ. ಸುಮಾರು 2 ಕಿಮೀ ನಡೆದುಕೊಂಡು ಹೋಗುವ ಭಕ್ತರು ಅಬ್ಬಿ ನೀರಿಗೆ ಮೈಯೊಡ್ಡಿ ತೀರ್ಥಸ್ನಾನ ಮಾಡುವ ಮೂಲಕ ಗುರುವಾರ ಎಳ್ಳಮಾವಾಸ್ಯೆ ಆಚರಿಸಿದರು.
ಕರಿಮನೆ, ಸಾದಗಲ್, ಹಲಸಿನಹಳ್ಳಿ, ಚಕ್ರಾ, ಹೊಸಬೀಡು ಗ್ರಾಮದ ನೂರಾರು ನಿವಾಸಿಗಳು ಬೆಳಗ್ಗೆಯಿಂದಲೇ ಚಿಕ್ಕಟ್ಟೆ ಅಬ್ಬಿಗೆ ತೆರಳಿ ತೀರ್ಥಸ್ನಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net