ತೀರ್ಥಂಕರರ ಪಲ್ಲಕ್ಕಿ ಉತ್ಸವ ಸಂಭ್ರಮ

0000
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಜೈನ ಸಮುದಾಯ ವತಿಯಿಂದ ಘಾರಗಿ ಲೊಂಪಿ ಹಾಗೂ ಮೋಕ್ಷ ಸಪ್ತಮಿ ನಿಮಿತ್ತ ಮಹಾವೀರ ನೇಮಿನಾಥ ತೀರ್ಥಂಕರರ ಪಲ್ಲಕ್ಕಿ ಉತ್ಸವ ಬುಧವಾರ ಸಂಭ್ರಮದಿಂದ ಜರುಗಿತು.

ಗ್ರಾಮದ ಶ್ರಾವಕ ಶ್ರಾವಕಿಯರು 16 ದಿನಗಳಿಂದ ಮಹಾವೀರ ನೇಮಿನಾಥ ತೀರ್ಥಂಕರರ ಬಸದಿಯಲ್ಲಿ ಪ್ರತಿಷ್ಠಾಚಾರ್ಯ ಸಂಜಯ ಉಪಾಧ್ಯೆ ನೇತೃತ್ವದಲ್ಲಿ ಭಾದ್ರಪದ ಮಾಸದಲ್ಲಿ ಬರುವ ಕ್ಷೋಡಶಕಾರಣ, ದಶಲಕ್ಷಣ, ಪಂಚಮೇರು, ರತ್ನತ್ರಯ, ಸುಗಂಧ ದಶಮು, ಘಾರಗಿ ಲೊಂಪಿ ಹಾಗೂ ಮೋಕ್ಷ ಸಪ್ತಮಿ ಸೇರಿ ಹಲವು ವೃತ ಕೈಗೊಳ್ಳಲಾಯಿತು.

ತೀರ್ಥಪ್ಪ ವೀರಗೌಡ, ರಾಜು ರೊಡ್ಡನವರ, ಬಾಹುಬಲಿ ವೀರಗೌಡ, ಗುಣವಂತಿ ಶೇಡಬಾಳೆ, ಸುಜಾತಾ ಹಳಕಿ, ಶೀಲಾ ವೀರಗೌಡ, ತಾಯವ್ವ ರೊಡ್ಡನವರ, ಮುತ್ತಪ್ಪ ವೀರಗೌಡ, ವೀರೇಂದ್ರ ಹಳಕಿ, ಅಣ್ಣಪ್ಪ ಪಡನೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net