

ತೀರ್ಥಹಳ್ಳಿ: ತಾಲೂಕಿನ ಮೂರು ಗ್ರಾಪಂಗೆ ನಡೆದ ಚುನಾವಣೆಯಲ್ಲಿ ಮೇಲಿನಕುರುವಳ್ಳಿ ಮತ್ತು ಅರಳಸುರುಳಿ ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಹುಂಚದಕಟ್ಟೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ.
ಪಟ್ಟಣಕ್ಕೆ ಹೊಂದಿಕೊಂಡಿದ್ದು ತಾಲೂಕಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಮೇಲಿನಕುರುವಳ್ಳಿ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಯು.ಡಿ.ವೆಂಕಟೇಶ್ ಆಯ್ಕೆಯಾದರು. ಬಿಜೆಪಿಯ ಶೋಭಾ ದಿನೇಶ್ ಅವರನ್ನು 12-9 ಮತಗಳ ಅಂತರದಿಂದ ಪರಾಭವಗೊಳಿಸಿದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ಅನಿತಾ ಪ್ರವೀಣ್ ಬಿಜೆಪಿಯ ಸುಧಾ ಕೃಷ್ಣಕುಮಾರ್ ಅವರನ್ನು 9-6 ಮತಗಳಿಂದ ಸೋಲಿಸಿ ಚುನಾಯಿತರಾದರು.
15 ಸಂಖ್ಯಾಬಲದ ಗ್ರಾಪಂನಲ್ಲಿ 8 ಕಾಂಗ್ರೆಸ್, 6 ಬಿಜೆಪಿ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯು.ಡಿ.ವೆಂಕಟೇಶ್ ಹೆಚ್ಚುವರಿಯಾಗಿ ಮೂರು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿ ಉಮಾನಾಯ್ಕ ಚುನಾವಣಾಧಿಕಾರಿಯಾಗಿದ್ದರು.
ಹುಂಚದಕಟ್ಟೆ ಗ್ರಾಪಂ: 9 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಶೃತಿ ತಾರಾನಾಥ್ ಕಾಂಗ್ರೆಸ್‌ನ ಕಲಾವತಿ ಆರ್.ನಾಯಕ್ ಅವರನ್ನು 5-3 ಮತಗಳ ಅಂತರದಿಂದ ಪರಾಭವಗೊಳಿಸಿ ಆಧ್ಯಕ್ಷರಾಗಿ ಆಯ್ಕೆಯಾಗಿದರು. ಒಂದು ಮತ ತಿರಸ್ಕೃತವಾಯಿತ್ತು. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಚ್.ಆರ್.ರಾಘವೇಂದ್ರ ಅವರು ಕಾಂಗ್ರೆಸ್ ಬೆಂಬಲಿತ ಎಸ್.ಕೆ. ಶಿವಾನಂದ ಅವರನ್ನು 5-4 ಮತಗಳಿಂದ ಸೋಲಿಸಿದ್ದಾರೆ. ಚುನಾವಣಾಕಾರಿಯಾಗಿ ಬಿಇಒ ವೈ,ಗಣೇಶ್ ಕಾರ್ಯನಿರ್ವಹಿಸಿದ್ದರು.
ಅರಳಸುರುಳಿ ಗ್ರಾಪಂ: ಅರಳಸುರುಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಎನ್.ಸುಜಾತಾ, ಉಪಾಧ್ಯಕ್ಷರಾಗಿ ವಾಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 7 ಸದಸ್ಯರನ್ನು ಹೊಂದಿರುವ ಗ್ರಾಪಂನಲ್ಲಿ ಜಿಪಂ ಎಇಇ ಅಣ್ಣಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.