ತೀರ್ಥಹಳ್ಳಿ ಪಪಂ ಅಧ್ಯಕ್ಷೆ ರಾಜೀನಾಮೆ

SUSHEELA
Published on

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಸದಸ್ಯರ ನಡುವಿನ ಒಪ್ಪಂದದಂತೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪಟ್ಟಣ ಪಂಚಾಯಿತಿಯಲ್ಲಿ 15 ಸದಸ್ಯರಿದ್ದು ಈ ಪೈಕಿ 9 ಕಾಂಗ್ರೆಸ್, 6 ಬಿಜೆಪಿ ಸದಸ್ಯರಿದ್ದಾರೆ. ಎರಡೂವರೆ ವರ್ಷ ಅವಧಿಯಲ್ಲಿ ಮೂವರ ನಡುವೆ ಒಡಂಬಡಿಕೆ ಆಗಿತ್ತು. 30 ತಿಂಗಳ ಅವಧಿಯಲ್ಲಿ 10 ತಿಂಗಳು ಶಬನಂ, ಸುಶೀಲಾ ಶೆಟ್ಟಿ ಅಧಿಕಾರ ನಡೆಸಿದ್ದಾರೆ. ಗೀತಾ ರಮೇಶ್ ಮುಂದಿನ 10 ತಿಂಗಳು ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಸಂಭವವಿದೆ. ಮುಂದಿನ ನೂತನ ಅಧ್ಯಕ್ಷರು ಆಯ್ಕೆ ಆಗುವವರೆಗೆ ಈಗಿರುವ ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ ಪ್ರಭಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net