ಅನಾರೋಗ್ಯಕ್ಕೆ ಬೇಸತ್ತು ಆರೋಗ್ಯ ಇಲಾಖೆ ನೌಕರ ಆತ್ಮಹತ್ಯೆ

Crime Logo
Published on

ಶಿರಸಿ: ಅನಾರೋಗ್ಯದಿಂದ ಬಳಲುತ್ತಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ರಾಜೀವನಗರದಲ್ಲಿ ನಡೆದಿದೆ.
ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ರಾಜೀವನಗರದ ಅಂತೋನ ಮೊತೇಸ ಫರ್ನಾಂಡೀಸ್ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಕಳೆದ ಐದು ವರ್ಷಗಳಿಂದ ಥೈರಾಯ್ಡ ಸಮಸ್ಯೆ ಮತ್ತು ಕಳೆದ ಮೂರು ತಿಂಗಳ ಹಿಂದೆ ಬಲ ಕೈಗೆ ಪಾರ್ಶ್ವ ವಾಯು ಪೀಡಿತರಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವಿಚಾರವನ್ನು ಮನಸಿಗೆ ಹಚ್ಚಿಕೊಂಡು ಗುರುವಾರ ಸಂಜೆ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net