ವಿಚ್ಛೇದಿತ ಪತಿ ಕಿರುಕುಳದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ

crime
Published on

ಮೈಸೂರು: ಜನತಾನಗರದಲ್ಲಿ ಶುಕ್ರವಾರ ರಾತ್ರಿ ವಿಚ್ಛೇದಿತ ಪತಿ ಮತ್ತು ಅತ್ತೆಯ ಕಿರುಕುಳದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ನಾರಾಯಣ್ ಅವರ ಪತ್ನಿ ಲಕ್ಷ್ಮೀ(39) ಆತ್ಮಹತ್ಯೆ ಮಾಡಿಕೊಂಡವರು. 19 ವರ್ಷಗಳ ಹಿಂದೆ ಲಕ್ಷ್ಮೀ ಅವರು ನಾರಾಯಣ್‌ರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ.


ಸಹೋದರಿಗೆ ಪತಿ, ಅತ್ತೆ ನಿತ್ಯ ಕಿರುಕುಳ ನೀಡುತ್ತಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದರು. ಈ ಮಧ್ಯೆ ನಾರಾಯಣ್, ಯಾವುದೋ ಕಾಗದ ಪತ್ರಕ್ಕೆ ಸಹಿ ಮಾಡಿಸಿಕೊಳ್ಳುವ ನೆಪದಲ್ಲಿ ಕೋರ್ಟ್‌ನಿಂದ ವಿಚ್ಛೇದನ ಸಹ ಪಡೆದುಕೊಂಡಿದ್ದರು.

ಬಳಿಕ ಪ್ರತ್ಯೇಕವಾಗಿ ವಾಸುತ್ತಿದ್ದ ಸಹೋದರಿಗೆ ಪತಿ ಮತ್ತು ಅತ್ತೆ ನಿತ್ಯ ಚುಚ್ಚು ಮಾತುಗಳನ್ನು ಆಡುವ ಮೂಲಕ ಮಾನಸಿಕ ಹಿಂಸೆ ಕೊಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೋದರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net