

ಸಿಂಧನೂರು: ಸಮೀಪದ ಕಲಮಂಗಿ ಬಳಿ ವಾಹನದ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದ್ದರಿಂದ 22 ಜನ ಗಾಯಗೊಂಡಿದ್ದಾರೆ. ಬಾಲಯ್ಯ ಕ್ಯಾಂಪ್‌ನಲ್ಲಿ ನೂತನ ದಂಪತಿಗಳಿಗೆ ನೀರು ಹಾಕುವ ಕಾರ್ಯಕ್ರಮ ಇದ್ದುದರಿಂದ
ಕುಷ್ಟಗಿ ತಾಲೂಕಿನ ಗುಮಗೇರಾದಿಂದ ತಾಲೂಕಿನ ಅರಗಿನಮರಕ್ಯಾಂಪ್ ಬಳಿಯ ಬಾಲಯ್ಯಕ್ಯಾಂಪ್‌ಗೆ ತೆರಳುತ್ತಿದ್ದಾಗ ಶನಿವಾರ ವಾಹನ ಪಲ್ಟಿಯಾಗಿದೆ.
ವಾಹನದಲ್ಲಿದ್ದ ಸಿದ್ಧಲಿಂಗ ಗುಮಗೇರಾ, ಮಂಜಮ್ಮ, ರಾಮಪ್ಪ, ಹೊಳೆಯಮ್ಮ, ಯಮನೂರಪ್ಪ, ದುರುಗಪ್ಪ, ಯಮನೂರು, ನೀಲವ್ವ, ಮಂಜುನಾಥ, ಅಡಿವೆಪ್ಪ, ಪ್ರಶಾಂತ, ಸರಸ್ವತಿ, ವೈಷ್ಣವಿ, ದೇವಮ್ಮ, ಗಂಗಪ್ಪ, ಗಂಗಮ್ಮ, ಜಯಶ್ರೀ, ಪೂಜಾ, ನಾಗಪ್ಪ, ಚಂಚಲಮ್ಮ, ಮಂಜುನಾಥ, ಪರಶುರಾಮ ಗುಮಗೇರಾ ಅವರು ಗಾಯಗೊಂಡಿದ್ದು ತುರ್ವಿಹಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.