

ಮೈಸೂರು: ಸಿಂಧೂರ ಯಶಸ್ಸಿನಿಂದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ನಗರದಲ್ಲಿ ಶುಕ್ರವಾರ ವಿ.ವಿ.ಮೊಹಲ್ಲಾದಲ್ಲಿ ತಿರಂಗಾ ಯಾತ್ರೆ ಆಯೋಜಿಸಲಾಗಿತ್ತು.
ವಿ.ವಿ. ಪುರಂ ಪೊಲೀಸ್ ಠಾಣೆ ಮುಂಭಾಗದಿಂದ ಆರಂಭಗೊಂಡ ಯಾತ್ರೆ ದೇವಸ್ಥಾನದ ರಸ್ತೆಮ, ಕಾಳಿದಾಸ ರಸ್ತೆ, ಗೋಕುಲಂ ಮುಖ್ಯ ರಸ್ತೆ, ನಿರ್ಮಲಾ ಕಾನ್ವೆಂಟ್ ಮೂಲಕ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮರಳಿ ವಿ.ವಿ. ಪುರಂ ಪೊಲೀಸ್ ಠಾಣೆ ಮುಂಭಾಗ ಅಂತ್ಯಗೊಂಡತು.
ರ‌್ಯಾಲಿಗೆ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಚಾಲನೆ ನೀಡಿದರು. ಮಾಜಿ ಸಂಸದ ಪ್ರತಾಪ್ ಸಿಂಹ, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಮುಖಂಡರಾದ ಶುಶ್ರುತ್‌ಗೌಡ, ಕೇಬಲ್ ಮಹೇಶ್, ಜಯಪ್ರಕಾಶ್, ಸುಬ್ಬಯ್ಯ, ಪರಮೇಶ್‌ಗೌಡ, ಶ್ರೀರಾಂ, ವೇದಾವತಿ, ಜೆಡಿಎಸ್ ಮುಖಂಡರಾದ ಮಂಜುನಾಥ್, ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಯೋಗಾನಂದ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬೈಕ್ ಅಲ್ಲದೇ ಕುದುರೆ ಸಾರೋಟು, ಎತ್ತಿನಗಾಡಿಗಳಲ್ಲಿ ಮೆರವಣಿಗೆ ನಡೆಸಿದ್ದು, ವಿಶೇಷವಾಗಿತ್ತು. ತಿರಂಗಾ ಯಾತ್ರೆಯುದ್ದಕ್ಕೂ ತ್ರಿವರ್ಣ ಧ್ವಜಗಳು ರಾರಾಜಿಸಿದವು.