

ಸಿಂಧನೂರು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನ ಪ್ರವಾಸಿಗರನ್ನು ಬಲಿಪಡೆದ ಉಗ್ರರ ಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಪಾಕಿಸ್ತಾನದ ಮೇಲೆ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಯಶಸ್ಸಿಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಅದ್ದೂರಿಯಾಗಿ ತಿರಂಗಾಯಾತ್ರೆ ಜರುಗಿತು.
ನಗರದ ಪ್ರವಾಸಿ ಮಂದಿರದಿಂದ ಆರಂಭಗೊಂಡ ತಿರಂಗಾಯಾತ್ರೆ ನಡಿಗೆಯು, ಗಾಂಧಿವೃತ್ತ, ಬಸವವೃತ್ತ, ಕಿತ್ತೂರರಾಣಿ ಚೆನ್ನಮ್ಮವೃತ್ತ, ಕನಕದಾಸ ವೃತ್ತದ ಮಾರ್ಗವಾಗಿ ತಹಸೀಲ್ದಾರ ಕಚೇರಿ ತಲುಪಲಾಯಿತು. ಮಾರ್ಗದುದ್ದಕ್ಕೂ ಮಾಜಿ ಸೈನಿಕರು, ನೂರಾರು ಸಂಖ್ಯೆಯ ವಿದ್ಯಾರ್ಥಿಗಳು, ರಾಜಕೀಯ ಗಣ್ಯರು, ಮುಖಂಡರು ಜಯಘೋಷಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ವೆಂಕಟಗಿರಿಕ್ಯಾಂಪ್‌ನ ಸಿದ್ದಾಶ್ರಮದ ಡಾ.ಸಿದ್ದರಾಮ ಶರಣರು, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸೈನಿಕರಾದ ವೀರೇಶ ಯಾದವ್, ಪರಶುರಾಮ, ಮುಖಂಡರಾದ ಬಸವರಾಜ ನಾಡಗೌಡ, ಅಮರೇಗೌಡ ವಿರುಪಾಪುರ, ಕೆ.ಕರಿಯಪ್ಪ, ಬಾಬುಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಎಂ.ದೊಡ್ಡಬಸವರಾಜ, ಈರೇಶ ಇಲ್ಲೂರು, ಮಲ್ಲಿಕಾರ್ಜುನ ಜೀನೂರು, ಶಿವಬಸನಗೌಡ ಗೊರೇಬಾಳ, ಆಸೀಫ್ ಸೇರಿ ಅನೇಕರು ಇದ್ದರು.