ಸದಾಶಿವಗಡದಲ್ಲಿ 500 ಮೀಟರ್‌ನ ತಿರಂಗಾ ಯಾತ್ರೆ

Flag
Published on

ಕಾರವಾರ: ಎಪ್ಪತ್ತೊಂಬತ್ತನೇ ಸ್ವಾತಂತ್ರ್ಯೋತ್ಸವದ  ಅಂಗವಾಗಿ ಬಿಜೆಪಿ ಗ್ರಾಮೀಣ ಯುವ ಮೋರ್ಚಾದಿಂದ ಬುಧವಾರ ಸದಾಶಿವಗಡದಲ್ಲಿ ಅತಿ ದೊಡ್ಡ ತಿರಂಗಾ ಯಾತ್ರೆ ಕೈಗೊಳ್ಳಲಾಯಿತು.

ಶಿವಾಜಿ ಕಾಲೇಜ್‌ನಿಂದ ಆರಂಭವಾದ ಯಾತ್ರೆ ದುರ್ಗಾದೇವಿ ದೇವಸ್ಥಾನದವರೆಗೂ ನಡೆಯಿತು. ನೂರಾರು ಜನ 500 ಮೀಟರ್ ಉದ್ದದ ಧ್ವಜವನ್ನು ಹಿಡಿದು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್ ನಾಯ್ಕ, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಗ್ರಾಮೀಣ ಯುವ ಮೋರ್ಚಾದ ಸುರೇಂದ್ರ ಗಾಂವಕರ್, ಸೂರಜ್ ದೇಸಾಯಿ, ಚಿತ್ತಾಕುಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತಿನ್ ಬಾಂದೇಕರ್, ದೀಪಕ್ ದೇಸಾಯಿ, ಮಂಗೇಶ ಗೋವೇಕರ, ಸುದೇಶ್ ತಳೇಕರ್, ಪರ್ಬತ್ ಸಂತೋಷ್ ನಾಯ್ಕ್, ಸುನಿಲ್ ನಾಯ್ಕ, ವೈಭವ್ ನಾಯ್ಕ, ದೀಪಕ್ ಕಾಶಿನಾಥ ನಾಯ್ಕ, ಆರತಿ ಬಾನಾವಳಿ, ಉಲ್ಲಾಸ್ ತಳೇಕರ್, ಸ್ವಾತಿ ದೇಸಾಯಿ, ವಿನಾಯಕ ದಂಡೇಬಾಗ್

ಗಜ ನಾಯ್ಕ, ಬಾಬನ್ ನಾಯಕ್, ವಿಜಯ ನಾಯ್ಕ ಇತರರು ನೇತೃತ್ವ ವಹಿಸಿದ್ದರು. ಇದೇ ಸಂದರ್ಭದಲ್ಲ ನಗರ ಘಟಕದಿಂದ ನಗರದಲ್ಲಿ ಬೈಕ್ ರ‍್ಯಾಲಿ ನಡೆಯಿತು. ನಗರ ಯುವ ಮೋರ್ಚಾದಿಂದ ನಗರದಲ್ಲಿ ಬೈಕ್ ರ‍್ಯಾಲಿ ನಡೆಯಿತು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ನಾಗೇಶ್ ಕುರುಡೇಕರ್, ಯುವ ಮುಖಂಡ ಪರ್ಬತ್ ಸಂತೋಷ ನಾಯ್ಕ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕಿಶನ್ ಕಾಂಬಳೆ, ರಾಜ್ಯ ಪ್ರಕೋಷ್ಟದ ಸುನೀಲ ಸೋನಿ, ಅಭಿ ಹರಿಕಂತ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net