ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅಗತ್ಯ: ಅಧ್ಯಕ್ಷ ಡಾ.ಯು.ಕೆ ಮೋನು ಹೇಳಿಕೆ

New Project (16)
Published on

ಉಳ್ಳಾಲ: ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸುವ ಜತೆಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಹೋರಾಟಗಾರನ್ನು ಸ್ಮರಿಸುವ ಕಾರ್ಯವೂ ಆಗಬೇಕು ಎಂದು ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಯು.ಕೆ.ಮೋನು ಹೇಳಿದರು.

ಸ್ವಾತಂತ್ರೃ ದಿನಾಚರಣೆ ಪ್ರಯುಕ್ತ ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್ ಮತ್ತು ಕಣಚೂರು ಮಹಿಳಾ ಪಪೂ ಕಾಲೇಜು ವತಿಯಿಂದ ಶನಿವಾರ ‘ತಿರಂಗ ರನ್-2025’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಣಚೂರು ಇಸ್ಲಾಮಿಕ್ ಟ್ರಸ್ಟ್‌ನ ಟ್ರಸ್ಟಿ ಉಮಯ ಬಾನು, ಕಣಚೂರು ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೈನ್ಸ್ ಪ್ರಾಂಶುಪಾಲ ಪ್ರೊ.ಯು.ಟಿ.ಇಕ್ಬಾಲ್ ಅಹ್ಮದ್, ಕಣಚೂರು ಮಹಿಳಾ ಪಪೂ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕಣಚೂರು ಪಬ್ಲಿಕ್ ಸ್ಕೂಲ್ ಮುಖ್ಯಶಿಕ್ಷಕಿ ಕರೆನ್ ಟ್ರೆಸಿಲ್ಲ ಡಿಸೋಜ, ಕಣಚೂರು ಫ್ರೀ ಸ್ಕೂಲ್ ಮುಖ್ಯಶಿಕ್ಷಕಿ ಲಿನೆಟ್ ಡಿಸೋಜ, ಕಚೇರಿ ವ್ಯವಸ್ಥಾಪಕ ಇರ್ಫಾನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net