ಉಪ್ಪಿನಬೆಟಗೇರಿಯಲ್ಲಿ ತಿರಂಗಾ ರ್ಯಾಲಿಗೆ ಚಾಲನೆ

upbr Tiranga yatre
Published on

ಉಪ್ಪಿನಬೆಟಗೇರಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಯೋಧರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಧಾರವಾಡ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ಮಂಗಳವಾರ ತಿರಂಗಾ ರ‍್ಯಾಲಿ ಜರುಗಿತು.

ಗ್ರಾಮದ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಸೇರಿದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ದೇಶ ಭಕ್ತರು ತೆರೆದ ವಾಹನಕ್ಕೆ ತಾಯಿ ಭಾರತಾಂಬೆಯ ಭಾವಚಿತ್ರ ಅಳವಡಿಸಿ ಶೃಂಗರಿಸಿದ್ದರು. ನಂತರ ಕರ್ತೃ ವಿರೂಪಾಕ್ಷ ದೇವರ ದರ್ಶನ ಪಡೆದು, ಮಾರ್ಕೆಟ್ ರಸ್ತೆಯಲ್ಲಿರುವ ಜಗದ್ಗುರು ಮೂರುಸಾವಿರ ವಿರಕ್ತಮಠಕ್ಕೆ ತೆರಳಿದರು.

ಕುಮಾರ ವಿರೂಪಾಕ್ಷ ಸ್ವಾಮೀಜಿಗಳು ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪವೃಷ್ಟಿ ಮಾಡಿ ತಿರಂಗಾ ರ್ಯಾಲಿಗೆ ಚಾಲನೆ ನೀಡಿದರು. ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ, ಜಿಪಂ ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ ಅವರು ಶ್ರೀಗಳಿಗೆ ಸಾಥ್ ನೀಡಿದರು.

ವಿರಕ್ತಮಠದಿಂದ ಆರಂಭವಾದ ಈ ತಿರಂಗಾ ರ್ಯಾಲಿಯು ಉಪ್ಪಿನಬೆಟಗೇರಿ, ಪುಡಕಲಕಟ್ಟಿ, ಕರಡಿಗುಡ್ಡ, ಯಾದವಾಡ, ತಿಮ್ಮಾಪೂರ, ಮರೇವಾಡ ಗ್ರಾಮಗಳ ಮೂಲಕ ಅಮ್ಮಿನಬಾವಿ ಗ್ರಾಮಕ್ಕೆ ತೆರಳಿತು. ಸುಮಾರು 150ಕ್ಕೂ ಅಧಿಕ ಬೈಕ್ ಸವಾರರು ತಮ್ಮ ಬೈಕ್​ಗೆ ರಾಷ್ಟ್ರಧ್ವಜ ಕಟ್ಟಿಕೊಂಡು ‘ಭಾರತ ಮಾತಾ ಕೀ ಜೈ’ ಘೊಷಣೆ ಕೂಗಿದರು.

ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಅಶೋಕ ಮಸೂತಿ, ಜಿಪಂ ಮಾಜಿ ಉಪಾಧ್ಯಕ್ಷ ನಿಜನಗೌಡ ಪಾಟೀಲ, ಧಾರವಾಡ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮಡಿವಾಳಪ್ಪ ಶಿಂದೋಗಿ, ಸೋಮಲಿಂಗ ಅಂಗಡಿ, ವೀರೇಶ ಕನಾಜಿ, ಸಂತೋಷಗೌಡ ಪಾಟೀಲ, ಶಿವಾನಂದ ದೇಶನೂರ, ಶಿವಾನಂದ ಹಟ್ಟಿ, ಪುನೀತ್ ಮಸೂತಿ, ಶಂಕರ ಕೋಮಾರದೇಸಾಯಿ, ಅಣ್ಣಪ್ಪ ನಿಲವಾಣಿ, ಶಿವಾನಂದ ಲಗಮಣ್ಣವರ, ಶಿವಾನಂದ ಬೆಂಡಿಗೇರಿ, ಕೃಷ್ಣಾ ಬುದ್ನಿ, ಶಶಿಮೌಳಿ ಕುಲಕರ್ಣಿ, ಸವಿತಾ ಮೂಗೈಯ್ಯನವರ, ದೀಪಾ ಶಿರೂರ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net