ಭಗತ್ ಸಿಂಗ್ ಸೇವಾ ಸಂಘದಿಂದ ತಿರಂಗಾ ತವರಲ್ಲಿ ತ್ರಿವರ್ಣ ಬೈಕ್ ರ್ಯಾಲಿ

Screenshot_20230812-181136_1-1.jpg
Published on

ಹುಬ್ಬಳ್ಳಿ: ಇಲ್ಲಿಯ ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಪ್ರತಿ ವರ್ಷದಂತೆ ಆಗಸ್ಟ್ 15ರಂದು ಬೆಳಗ್ಗೆ 9.30ಕ್ಕೆ ತಿರಂಗಾ ತವರೂರಲ್ಲಿ ತ್ರಿವರ್ಣ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಸಂದ ಅಧ್ಯಕ್ಷ ವಿಶಾಲ ಜಾಧವ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಐಎಸ್ ಮಾನದಂಡದ ಅನುಸಾರ ತ್ರಿವರ್ಣ ಧ್ವಜ ತಯಾರಿಸುವ ಕೇಂದ್ರ ಹುಬ್ಬಳ್ಳಿಯಲ್ಲಿ ಇದೆ. ಹಾಗಾಗಿ ಪ್ರತಿ ವರ್ಷ ತಿರಂಗಾ ತವರಿನಲ್ಲಿ ಇಂತಹ ವಿಶೇಷ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸುತ್ತ ಬರಲಾಗಿದೆ.

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಸ್ಮರಣೆಯಲ್ಲಿ ರಕ್ತದಾನ ಶಿಬಿರದಂತಹ ಹಲವು ವಿಧಾಯಕ ಕಾರ್ಯಗಳನ್ನು ಮಾಡುತ್ತ ಬಂದಿದ್ದೇವೆ ಎಂದರು.

ಇದೀಗ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಆ. 15ರಂದು ನಗರದ ಕುಸುಗಲ್ ರಸ್ತೆ ರೈಲ್ವೆ ಸೇತುವೆ ಬಳಿಯಿಂದ ಬೈಕ್ ರ್ಯಾಲಿ ನಡೆಯಲಿದ್ದು, ಕಿತ್ತೂರ ಚನ್ನಮ್ಮ ವೃತ್ತದವರೆಗೆ ಸಾಗಲಿದೆ.

ಸಭಾ ಕಾರ್ಯಕ್ರಮದಲ್ಲಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕರಾದ ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಾಧಕ ರೈತರು, ಶ್ರಮಿಕರು ಹಾಗೂ ಸೈನಿಕರನ್ನು ಸನ್ಮಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net