

ಹೊನ್ನಾವರ: ಪಾಕಿಸ್ತಾನದ ವಿರುದ್ದ ಆಫರೇಶನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರಿಗೆ ಅಭಿನಂದಿಸಲು ಹಾಗೂ ದೇಶಪ್ರೇಮ ಜಾಗೃತಿಗೊಳಿಸಲು ತಿರಂಗ ಯಾತ್ರೆ ಕಾರ್ಯಕ್ರಮ ಪಟ್ಟಣದಲ್ಲಿ ಶುಕ್ರವಾರ ನಡೆಯಿತು. ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ತಿರಂಗ ಯಾತ್ರೆಯಲ್ಲಿ 100 ಮೀಟರ್ ಉದ್ದದ ಭಾರತದ ಧ್ವಜವನ್ನು ಹಿಡಿದು `ಭಾರತ ಮಾತಾ ಕಿ ಜೈ' ಘೋಷಣೆ ಮೊಳಗಿಸಲಾಯಿತು.
ರಾಷ್ಟ್ರೀಯವಾದಿ ಚಿಂತಕ ಆದರ್ಶ ಗೋಖಲೆ ಮಾತಣಾಡಿ, ಹೆಣ್ಣುಮಕ್ಕಳನ್ನು ಗೌರವಿಸುವ ಭಾರತವು ಅವರಿಗೆ ಆದ ಅನ್ಯಾಯಕ್ಕೆ ಉತ್ತರವನ್ನು ನೀಡುತ್ತದೆ. ಆಫರೇಷನ್ ಸಿಂಧೂರವು ಭಾರತದ ವಿರಾಟ್ ರೂಪವನ್ನು ತೋರಿಸಿದೆ. ಉಗ್ರ ನೆಲೆಗಳ ಧ್ವಂಸ ಮಾಡುವ ಮೂಲಕ ಇದು ಬಲಿಷ್ಠ ಭಾರತ ಎನ್ನುವುದನ್ನು ಸಾರಿದೆ. ಯುವಜನಾಂಗವು ಕ್ರಿಕೆ ಮತ್ತು ಸಿನೇಮಾ ತಾರೆಯರನ್ನು ಹಿರೋಗಳಂತೆ ಬಿಂಬಿಸುವುದನ್ನು ಬಿಟ್ಟು ದೇಶ ಕಾಯುವ ಸೈನಿಕರನ್ನು ನಿಜವಾದ ನಾಯಕ ಎಂಬ ಭಾವನೆಯನ್ನು ನೆಲೆಗೊಳಿಸಬೇಕು. ದೇಶದ ಎಲ್ಲರ ಪ್ರಜೆಗಳು ಯೋಧರಂತೆ ದೇಶಪ್ರೇಮವನ್ನು ಮೆರೆಯಬೇಕು ಎಂದರು.
ಮಾಜಿ ಶಾಸಕ ಸುನೀಲ ನಾಯ್ಕ, ಶಿವಾನಂದ ಹೆಗಡೆ, ರಾಜು ಭಂಡಾರಿ, ಮಂಜುನಾಥ ನಾಯ್ಕ, ಬಿ.ಟಿ.ಗಣಪತಿ ನಾಯ್ಕ, ಗಣಪತಿ ಗೌಡ, ಯೋಗೀಶ ಮೇಸ್ತ, ಕೇಶವ ನಾಯ್ಕ, ಎಂ.ಎಸ್.ಹೆಗಡೆ, ಎಚ್.ಆರ್.ಗಣೆಶ, ಮಹೇಶ ಮೇಸ್ತ, ವಿಶ್ವನಾಥ ನಾಯಕ ಬಿಜೆಪಿ ಕಾರ್ಯಕರ್ತರು, ನಾಗರೀಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.