

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ 78 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರ್ರ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 51, 52, 53 ಹಾಗೂ 54 ರ ವ್ಯಾಪ್ತಿಯಲ್ಲಿ ಬುಧವಾರ ಏರ್ಪಡಿಸಿದ್ದ ಹರ್ ಘರ್ ತಿರಂಗಾ ಬೈಕ್ ರ್ಯಾಲಿಗೆ ಶಾಸಕ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.
ಬೈಕ್ ರ್ಯಾಲಿಯು ಅಂಬೇಡ್ಕರ ಮೈದಾನ ಬಳಿಯ ಆಯುವೇರ್ದಿಕ ಕಾಲೇಜಿನಿಂದ ಕೇಶವಕುಂಜ ಮೂಲಕ ಡಾಲರ್ಸ್ ಕಾಲನಿ, ಬ್ಯಾಂಕರ್ಸ್ ಕಾಲನಿ, ಮುಕುಂದ ನಗರ, ಸಹದೇವನಗರ, ಇಂದ್ರಪ್ರಸ್ಥ ನಗರ, ಆನಂದ ನಗರ, ಪ್ರಿಯದರ್ಶನಿ ಕಾಲನಿ ಮೂಲಕ ಸಂಚರಿಸಿ ಅಕ್ಷಯ ಪಾರ್ಕ್ ಸಮುದಾಯ ಭವನದಲ್ಲಿ ಸಂಪೂರ್ಣಗೊಂಡಿತು.
ಪ್ರಮುಖರಾದ ಪ್ರಕಾಶ ಕ್ಯಾರಕಟ್ಟಿ, ಅಶೋಕ ವಾಲ್ಮೀಕಿ, ಕೃಷ್ಣಾ ಗಂಡಗಾಳೇಕರ, ಹರೀಶ ಜಂಗ್ಲಿ, ಮುಕುಂದ ಗೌಡ ಗುಗ್ರಿ, ದೀಪಕ ಜಿತೂರಿ, ಮೋಹನ ಬರೋಡೆ, ಪ್ರವೀಣ ಪವಾರ, ದೇವದಾಸ ಹಬೀಬ, ಸಿದ್ದೇಶ ಕಬಾಡರ, ರವಿ ಬಂಕಾಪುರ, ಮಲ್ಲಿಕಾರ್ಜುನ ಮರಿಗೌಡರ ಹಾಗೂ ಇತರರು ಹಾಜರಿದ್ದರು.