

ಬ್ರಹ್ಮದೇವನಮಡು: ಟಿಪ್ಪು ಸುಲ್ತಾನ್ ಅಪ್ರತಿಮ ಅರಸ. ಅವರ ಸಾಹಸ, ಧೈರ್ಯ, ಪರಾಕ್ರಮ ಮೆಚ್ಚುವಂತಹದ್ದು ಎಂದು ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಜಿಲ್ಲಾ ಯುವ ಟಕದ ಅಧ್ಯ ಮೋದಿನ್ ಶಾಬಾದಿ ಹೇಳಿದರು.
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಟಿಪ್ಪು ವೃತ್ತದಲ್ಲಿ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ, ಟಿಪ್ಪು ಕ್ರಾಂತಿ ಸೇನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಖಂಡ ಶ್ರೀಶೈಲ ಜಾಲವಾದಿ ಮಾತನಾಡಿ, ಟಿಪ್ಪು ಸುಲ್ತಾನ್ ರೈತರು, ಜನರ ಅನುಕೂಲಕ್ಕಾಗಿ ಮಾರುಕಟ್ಟೆಗಳು, ಕೆರೆ, ಅಣೆಕಟ್ಟೆ, ಬಂದರು ನಿರ್ಮಿಸಿದರು ಎಂದರು. ಬಿಜೆಪಿ ಯುವ ಮುಖಂಡ ಸೈಪುನ್ ಕೋರವಾರ ಟಿಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಗ್ರಾಪಂ ಸದಸ್ಯ ಸಲೀಂ ಬಾಗವಾನ ಧ್ವಜಾರೋಹಣ ನೆರವೇರಿಸಿದರು. ಕಾಮಣ್ಣ ನಾಯ್ಕೋಡಿ, ಟಿಪ್ಪು ಕ್ರಾಂತಿ ಸೇನೆ ತಾಲೂಕಾಧ್ಯ ಶಬ್ಬೀರ್ ಬಾಗವಾನ, ಮುರ್ತುಜಾ ಮಕಾಂದಾರ, ಸೈಪನ್ ಬಾಗವಾನ, ಅಲ್ಲಾಭ ಬಾಗವಾನ್, ನಜೀರ್ ಕೊರಬು, ಮಹೆಬೂಬ್ ಗಿರಣಿ, ಅಕ್ಬರ್ ಬಾಗವಾನ, ಮೈಬೂಬ್ ದೊಡ್ಡಮನಿ, ಮೈಬೂಬ್ ಬಾಗವಾನ್, ಮಡಿವಾಳಪ್ಪ ನಾಯ್ಕೋಡಿ, ನಿಂಗಪ್ಪ ಚಲವಾದಿ, ಶ್ರೀಶೈಲ ಗಡಿಗೆನ್ನವರ, ಸದ್ದಾಂ ಬಾಗವಾನ ಇತರರಿದ್ದರು.