ಟಿಪ್ಪು ನಿಜ ಕನಸುಗಳು ನಾಟಕ ಹೌಸ್‌ಫುಲ್

19 (2)
Published on

ಮೈಸೂರು: ಖಾಕಿ ಪಡೆಯ ಸರ್ಪಗಾವಲಿನಲ್ಲಿ ಪ್ರದರ್ಶನ ಮುಂದುವರಿಸಿರುವ ‘ಟಿಪ್ಪು ನಿಜ ಕನಸುಗಳು’ ನಾಟಕಕ್ಕೆ ಎರಡನೇ ದಿನವೂ ಪ್ರೇಕ್ಷಕರಿಂದ ಉತ್ತಮ ಪ್ರೋತ್ಸಾಹ ವ್ಯಕ್ತವಾಯಿತು.


ರಂಗಾಯಣ ಭೂಮಿಗೀತ ರಂಗವೇದಿಕೆಯಲ್ಲಿ ನಾಟಕ ಹೌಸ್‌ಫುಲ್ ಪ್ರದರ್ಶನ ಕಂಡಿತು. ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ರಚಿಸಿ, ನಿರ್ದೇಶಿಸಿರುವ ಈ ನಾಟಕವನ್ನು ರಂಗಾಯಣದ ಕಲಾವಿದರು ಪ್ರಸ್ತುತಪಡಿಸಿದರು. ಈ ನಾಟಕ ಕೃತಿಗೆ ವಿರೋಧ ವ್ಯಕ್ತವಾಗಿದ್ದರಿಂದ ನಾಟಕ ಪ್ರದರ್ಶನಕ್ಕೆ ಅಡ್ಡಿಯಂಟು ಮಾಡಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸರು ಕಲಾಮಂದಿರ ಮತ್ತು ರಂಗಾಯಣ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದರು.


ಟಿಕೆಟ್‌ಗೆ ಹೆಚ್ಚಿದ ಬೇಡಿಕೆ: ‘ಟಿಪ್ಪು ನಿಜ ಕನಸುಗಳು’ ನಾಟಕದ ಮುಂದಿನ ಪ್ರದರ್ಶನಗಳ ಟಿಕೆಟ್‌ಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ನ.30ರ ಪ್ರದರ್ಶನ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ನ.24 ರ ಪ್ರದರ್ಶನದ ಶೇ.90 ರಷ್ಟು ಟಿಕೆಟ್ ಮಾರಾಟವಾಗಿವೆ. ಈ ಪೈಕಿ ಆನ್‌ಲೈನ್‌ನ 100 ಹಾಗೂ ಆಫ್‌ಲೈನ್‌ನ 80 ಟಿಕೆಟ್ಗ್‌ಳು ಮಾರಾಟವಾಗಿವೆ. 26ರ ಪ್ರದರ್ಶನದ 150 ಟಿಕೆಟ್, 27ರ ಪ್ರದರ್ಶನದ 60 ಟಿಕೆಟ್ ಹಾಗೂ ಡಿ.3 ಮತ್ತು 4 ರ ಪ್ರದರ್ಶನದ ತಲಾ 40 ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net