ತಿಪಟೂರು ಸತ್ಯಗಣಪತಿಗೆ 96ರ ಸಂಭ್ರಮ!

Sri Satyagnapathi Seva Sangha Trust Ganapa (1)
ತಿಪಟೂರಿನ ಶ್ರೀ ಸತ್ಯಗಣಪತಿ
Published on

1929ರಲ್ಲಿ ಚಾಲನೆ - ಈ ಬಾರಿ ತಾಲೂಕಿನಲ್ಲಿ ಇನ್ನಷ್ಟು ಕಳೆಗಟ್ಟಲಿದೆ ಆಚರಣೆ

ತಿಪಟೂರು: ಭಾರತೀಯ ಸಂಸತಿಯ ಪ್ರತಿಕವಾದ ಗಣೇಶ ಚತುರ್ಥಿಯಂದು ಸಾರ್ವ ಜನಿಕವಾಗಿ ಪ್ರತಿಷ್ಠಾಪಿಸುವ ಕಾಯಕ ನಗರದಲ್ಲಿ

ಪ್ರಾರಂಭವಾಗಿ ಇಂದಿಗೆ 96 ವರ್ಷ.

ಐಕ್ಯತೆಯ ಸಂಕೇತವಾಗಿ ಮತ್ತು ಸ್ವಾತಂತ್ರ$್ಯ ಸಂಗ್ರಾಮದ ಹೋರಾಟದ ದಿನಗಳಲ್ಲಿ ಬ್ರಿಟಿಷರ ಕಣ್ಣು ತಪ್ಪಿಸಿ, ಅವರಿಗೆ ಅನುಮಾನ ಬಾರದಂತೆ ಹೋರಾಟದ ಮುಂದಿನ ಕಾರ್ಯತಂತ್ರಗಳನ್ನು ಚಳವಳಿದಾರರಿಗೆ ತಿಳಿಸುವ ಸಲುವಾಗಿ ಸ್ವಾತಂತ್ರ$್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕರು ಕರೆ ನೀಡಿದ ಸಾಮೂಹಿಕ ಗಣೇಶೋತ್ಸವಕ್ಕೆ ತಿಪಟೂರಿನಲ್ಲಿ ಚಾಲನೆ ದೊರಕಿದ್ದು 1929ರಲ್ಲಿ. ಅಂದಿನ ದಿನಗಳಲ್ಲಿ ಸಂಸ್ಥಾಪಕ ದಿ.ದಾಸಪ್ಪ ಅವರು ನಗರದ ದೊಡ್ಡಪೇಟೆ ರಸ್ತೆಯ ದಿವಾನ್​ ಐಯ್ಯಂಗಾರ್​ ಛತ್ರದಲ್ಲಿ ಶ್ರೀ ಸತ್ಯಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ 40ರಿಂದ 45 ದಿನಗಳ ಕಾಲ ನಿತ್ಯ ಭಜನೆ, ಹೋಮ, ಹರಿಕಥೆಗಳನ್ನು ಏರ್ಪಡಿಸಿ ಅಂತಿಮವಾಗಿ ನಗರದ ಅಮಾನಿಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು.

ಗಣಪತಿ ವಿಸರ್ಜನೆ ಸಂದರ್ಭ ಏರ್ಪಡಿಸಲಾಗುತ್ತಿದ್ದ ಸಿಡಿ ಮದ್ದಿನ ಚಮತ್ಕಾರಗಳನ್ನು ನೋಡಲು ರಾಜ್ಯದ ಜನರ ದಂಡೇ ಆಗಮಿಸುತ್ತಿತ್ತು. ಅಮಾನಿಕೆರೆಯಲ್ಲಿ ತೆಪ್ಪದಲ್ಲಿ ವಿರಾಜಮಾನರಾದ ಗಣಪತಿಯನ್ನು 3 ಸುತ್ತು ಪ್ರದಣೆ ಹಾಕಿದ ನಂತರ ಕೇರಳಿಗರಿಂದ ಸಿಡಿಮದ್ದಿನ ಚಮತ್ಕಾರಕ್ಕೆ ಜನ ಕಾತರದಿಂದ ಕಾಯುತ್ತಿದ್ದರು. ಗಗನದೆತ್ತರದಲ್ಲಿ

ಪಟಾಕಿ ಸಿಡಿದ ನಂತರ ಅವುಗಳಿಂದ ಜೀವಂತ ಪಾರಿವಾಳಗಳು ಹೊರಬರುವುದನ್ನು ನೋಡುವುದೇ ಒಂದು ವಿಸ್ಮಯವಾಗಿತ್ತು.

ದಾಸಪ್ಪ ಅವರ ಕಾಲಾನಂತರ ಅವರ ಪುತ್ರ ಗಣಪತಿ, ಅವರ ನಂತರ ಮಾಜಿ ಸಚಿವ ಬಿ.ಎಸ್​.ಚಂದ್ರಶೇಖರಯ್ಯ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡ ಶ್ರೀ ಸತ್ಯಗಣಪತಿ ಸೇವಾ ಸಂ, ನಂತರ ಟ್ರಸ್ಟ್​ ಆಗಿ ಮಾರ್ಪಟ್ಟಿದ್ದು, ಪ್ರಸ್ತುತ ಮಾಜಿ ಸಚಿವ ಬಿ.ಸಿ. ನಾಗೇಶ್​ ಅವರ ಪುತ್ರ ಶ್ರೀಕಂಠ ಟ್ರಸ್ಟಿನ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಕಳೆದ ಹತ್ತಿಪ್ಪತ್ತು ವರ್ಷಗಳಿಂದ ನಗರದ

ಪೊಲೀಸ್​ ಠಾಣೆ ಹಿಂಭಾಗದಲ್ಲಿ ಶ್ರೀ ಸತ್ಯ ಗಣಪತಿ ಸೇವಾ ಸಂ ಟ್ರಸ್ಟ್​ ಹೆಸರಿನಲ್ಲಿ ಸ್ವಂತ

ಆಸ್ಥಾನ ಮಂಟಪ ಹೊಂದಿದೆ.

ಕರೊನಾ ವೇಳೆ ರಂಗು ಕಾಣಲಿಲ್ಲ

2019&20ರಲ್ಲಿ ಕರೊನಾ ಕಾರಣ ಗಣಪತಿ ಉತ್ಸವಕ್ಕೆ ಕಠಿಣ ರ್ನಿಬಂಧ ವಿಧಿಸಿದ್ದಾಗ್ಯೂ ನೂರಿನ್ನೂರು ಮಂದಿಯ ಉಪಸ್ಥಿತಿಯಲ್ಲಿ ಪೊಲೀಸರ ಸರ್ಪಗಾವಲಿನಲ್ಲಿ ಗಣೇಶೋತ್ಸವ ನಡೆಯುವುದು ತಪ್ಪಲಿಲ್ಲ. ಆದರೆ, ಮೆರವಣಿಗೆ ಸಾಗುವ ಪ್ರತಿ ಹಂತದಲ್ಲೂ ಹೂವು, ಹಣ್ಣು ಮತ್ತು ಕರಿದ ಪದಾರ್ಥಗಳಿಂದ ಮಾಡಿದ ಮಣ ಭಾರದ ಹಾರಗಳು ಗಣಪತಿಗೆ ಅರ್ಪಿತವಾಗಲಿಲ್ಲ. ಮಂಗಳಾರತಿ ಮಾಡಿ ಈಡುಗಾಯಿ ಹಾಕಿ ಕೈ ಮುಗಿಯುವುದಕ್ಕೂ ರ್ನಿಬಂಧ ಹೇರಲಾಗಿತ್ತು. ಇದೀಗ 96 ನೇ ಗಣೇಶೋತ್ಸವಕ್ಕೆ ವೇದಿಕೆ ಸಜ್ಜಾಗಿದ್ದು, ಆ.27 ರಂದು ಸಾಂಪ್ರದಾಯಿಕವಾಗಿ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯಲಿದೆ. ಇಡೀ ನಾಡಿನ ಜನ ಈ ಸುಸಂದರ್ಭವನ್ನು ಎದುರು ನೋಡುತ್ತಿದ್ದಾರೆ.

ಸುಮಾರು 95 ವರ್ಷಗಳಿಂದ ಅನೂಚಾನವಾಗಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ನವೆಂಬರ್​ ಕನ್ನಡ ಮಾಸದಲ್ಲಿ ಕಲ್ಪತರು ನಾಡಹಬ್ಬದ ಸಂದರ್ಭ ವಿನೂತನವಾಗಿ ಸಾಂಸತಿಕ ಮಾಸ ಆಚರಿಸುವ ಮೂಲಕ ಗಣೇಶೋತ್ಸವ ಸಂಭ್ರಮಕ್ಕೆ ಮೆರುಗು ತರಲಾಗುವುದು. - ಬಿ.ಆರ್​.ಶ್ರೀಕಂಠ ಅಧ್ಯಕ್ಷ, ಶ್ರೀ ಸತ್ಯಗಣಪತಿ ಸೇವಾ ಟ್ರಸ್ಟ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net