ತಿಪಟೂರಿನಲ್ಲಿ ಅಂಚೆ ಕಚೇರಿ ಗ್ರಾಹಕರಿಗೆ ಮಾಂಸದ ದುರ್ನಾತ ; ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ; ಅಂಗಡಿಗಳ ಸ್ಥಳಾಂತರಕ್ಕೆ ಮೀನಮೇಷ

Tiptur Head Post Office Issue. 03,TPT-1 (2)
Published on

ತಿಪಟೂರು : ನಗರದ ಪ್ರಧಾನ ಅಂಚೆ ಕಚೇರಿಗೆ ಹೊಂದಿಕೊಂಡಂತೆ ಕೋಳಿ, ಮೀನು, ಮತ್ತು ಮಾಂಸದ ಅಂಗಡಿಗಳಿದ್ದು, ವ್ಯಾಪಾರದ ಪೈಪೋಟಿಯಿಂದ ಬೀದಿಬದಿಗೆ ಬಂದಿರುವ ಕಾರಣ ಅಂಚೆ ಕಚೇರಿಗೆ ಹೋಗುವ ಜನ ಸಾಮಾನ್ಯರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಅಂಚೆ ಕಚೇರಿ ರಸ್ತೆ ಬದಿಯಲ್ಲಿ ತೂಗು ಹಾಕಿರುವ ಕೋಳಿ, ಮೀನು ಮತ್ತು ಮಾಂಸದ ರಾಶಿ ಹಾಗೂ ತ್ಯಾಜ್ಯದ ದುರ್ವಾಸನೆ ಸಹಿಸಲಾಗದೆ ಕೆಲವರು ಅಂಚೆ ಕಚೇರಿಗೆ ಬರುವುದನ್ನೇ ನಿಲ್ಲಿಸಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಾರೆ. ಇನ್ನು ತಿಂಗಳಿಗೊಮ್ಮೆ ನೀಡುವ ಪಿಂಚಣಿ ಹಣ ಪಡೆಯಲು ಅಥವಾ ಆಧಾರ್ ಕಾರ್ಡ್ ತಿದ್ದುಪಡಿಯ ಅನಿವಾರ್ಯತೆ ಇರುವವರು ಮೂಗು, ಬಾಯಿ ಮುಚ್ಚಿಕೊಂಡು ಹೋಗಿ ಬರುತ್ತಿದ್ದಾರೆ.

ಕಚೇರಿ ದ್ವಾರ ಸ್ಥಳಾಂತರಿಸಲಿ: ಕೋಳಿ, ಮಾಂಸ ಮಾರಾಟದಿಂದಲೇ ಜೀವನ ಕಟ್ಟಿಕೊಂಡಿರುವವರಿಗೆ ಅನ್ಯಾಯವಾಗುತ್ತದೆ ಎನ್ನುವ ಕಾರಣದಿಂದ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಮಸ್ಯೆ ಇದ್ದರೆ, ಕನಿಷ್ಠ ಕಚೇರಿಯ ಪ್ರವೇಶ ದ್ವಾರವನ್ನಾದರೂ ಪಶ್ಚಿಮ ದಿಕ್ಕಿಗೆ ಬದಲಾಯಿಸಿದರೆ ಪರಿಸ್ಥಿತಿ ಸುಧಾರಿಸಿ, ಕಚೇರಿ ಆದಾಯವೂ ಹೆಚ್ಚುತ್ತದೆ ಎನ್ನುವುದು ಸಿಬ್ಬಂದಿ ಅಭಿಪ್ರಾಯ.

ಕೋಳಿ ತ್ಯಾಜ್ಯ ಸಂಗ್ರಹಿಸಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಿತ್ಯವೂ ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಲಾಗಿದೆ. ಪ್ರತ್ಯೇಕ ಮಾಂಸ ಮಾರುಕಟ್ಟೆ ನಿರ್ಮಿಸಲು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಉಮಾಂಕಾಂತ್, ನಗರಸಭೆ ಆಯುಕ್ತ ಸಮಸ್ಯೆ ಗಮನಕ್ಕೆ ಬಂದಿದೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು. ಪಿ.ಜೆ.ರಾಮ ಮೋಹನ್, ನಗರಸಭೆ ಅಧ್ಯಕ್ಷ ತಿಪಟೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net