

ಚಿಕ್ಕಬಳ್ಳಾಪುರ: ಗ್ರಾಹಕ ಸ್ನೇಹಿ ವಹಿವಾಟಿನ ಮೂಲಕ ಒಳ್ಳೆಯ ಲಾಭವನ್ನು ಗಳಿಸಲು ನಗರಸಭೆ ಅಧ್ಯಕ್ಷ ಗಜೇಂದ್ರ ಬೀದಿಬದಿ ವ್ಯಾಪಾರಸ್ಥರಿಗೆ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ನಗರಸಭೆಯ ಸಭಾಂಗಣದಲ್ಲಿ ಶುಕ್ರವಾರ ವ್ಯಾಪಾರಸ್ಥರಿಗೆ ತರಬೇತಿ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.
ಗುಣಮಟ್ಟ ಮತ್ತು ಸುರಕ್ಷತೆಯ ಸೇವೆ, ವಹಿವಾಟಿನ ಬಗ್ಗೆ ತರಬೇತಿಯ ಮೂಲಕ ಈಗಾಗಲೇ ಮಾರ್ಗದರ್ಶನ ನೀಡಲಾಗಿದೆ. ಪ್ರತಿಯೊಬ್ಬರು ಚಾಚೂ ತಪ್ಪದೇ ನಿಯಮಗಳನ್ನು ಪಾಲಿಸಬೇಕು ಎಂದರು.
ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್ ಮಾತನಾಡಿ, ಬೀದಿಬದಿ ವ್ಯಾಪಾರಸ್ಥರು ಜೀವನೋಪಾಯಕ್ಕಾಗಿ ಉತ್ಪನ್ನಗಳನ್ನು ಮಾರಾಟದ ವಹಿವಾಟು ನಡೆಸುತ್ತಿದ್ದು ಇದು ಗ್ರಾಹಕ ಸ್ನೇಹಿಯಾಗಿರಬೇಕು. ಉತ್ತಮ ಸೇವೆಯಡಿ ಲಾಭದಾಯಕವಾಗಿರಬೇಕು ಎಂದರು.
ಗ್ರಾಹಕರ ಆರೋಗ್ಯವನ್ನೂ ದೃಷ್ಟಿಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಪಾಯಕಾರಿ ರಾಸಾಯನಿಕ, ಕಳಪೆ ಪದಾರ್ಥಗಳ ಬಳಕೆ ಮಾಡಬಾರದು ಎಂದು ತಿಳಿಸಿದರು.
ಬೀದಿ ಬದಿಯಲ್ಲಿ ಇಡ್ಲಿ, ದೋಸೆ, ಕಬಾಬ್, ಪಾನಿಪೂರಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ತಳ್ಳುವ ಗಾಡಿಗಳಲ್ಲಿ ಮಾರುವ 50 ಕ್ಕೂ ವ್ಯಾಪಾರಿಗಳಿಗೆ ತರಬೇತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಯತೀಶ್, ಮುಖಂಡ ಸಂತೋಷ್ ಮತ್ತಿತರರು ಇದ್ದರು.