ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ದರ್ಶನ ಪಡೆದ ರಘುಮೂರ್ತಿ

Tipperudraswamy, Darshan, Raghumurthy, Challakere, Kshetra, Win,
Published on

ನಾಯಕನಹಟ್ಟಿ: ಚಳ್ಳಕೆರೆ ಕ್ಷೇತ್ರದಿಂದ ಗೆಲುವು ಸಾಧಿಸಿದ ಟಿ.ರಘುಮೂರ್ತಿ ಭಾನುವಾರ ಸಂಜೆ ಪಟ್ಟಣದ ಗುರುತಿಪ್ಪೇರುದ್ರ ಸ್ವಾಮಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು.

ಕುಟುಂಬ ಸಮೇತರಾಗಿ ಬಂದ ಅವರು, ನೂರಾರು ಬೆಂಬಲಿಗರೊಂದಿಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಮಾತನಾಡಿದ ರಘುಮೂರ್ತಿ ಅವರು, ನನ್ನ ಇಂದಿನ ಈ ಗೆಲುವು ಚಳ್ಳಕೆರೆ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಕೊಡುಗೆಗೆ ಸಂದ ಗೆಲುವಾಗಿದೆ. ಸಮಸ್ತ ಚಳ್ಳಕೆರೆ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಮೂಲಸೌಕರ್ಯ ಈಡೇರಿಸುವುದು ನನ್ನ ಆದ್ಯತೆಯಾಗಿದೆ ಎಂದು ಹೇಳಿದರು.

ಹಾಗೇ ಪರಶುರಾಂಪುರ ತಾಲೂಕು ಕೇಂದ್ರವಾಗಿಸುವುದು, ಚಳ್ಳಕೆರೆ ನಗರದಲ್ಲಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ಎಂಜಿನಿಯರಿಂಗ್ ಕಾಲೇಜು, ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಚಳ್ಳಕೆರೆ ನಗರಸಭೆ ಸದಸ್ಯ ವೀರಭದ್ರಪ್ಪ, ಪ.ಪಂ.ಮಾಜಿ ಸದಸ್ಯ ಎನ್.ಎಂ.ಐ.ಡಿ. ಮನ್ಸೂರ್, ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಟಿ.ರುದ್ರಮುನಿ, ಮುಖಂಡರಾದ ಕಾಕಸೂರಯ್ಯ, ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net