ರೈಲು-ಟಿಪ್ಪರ್ ಭೀಕರ ಆ್ಯಕ್ಸಿಡೆಂಟ್​; ಅಪಘಾತಕ್ಕೆ ಕಾರಣ ಗೂಗಲ್​!?

Train 3
Published on

ಆನೇಕಲ್​: ಸಾವಿರಾರು ಪ್ರಯಾಣಿಕರಿದ್ದ ರೈಲು ಹಾಗೂ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಛಿದ್ರಛಿದ್ರಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

ಹೀಗೊಂದು ಭೀಕರ ಅಪಘಾತ ಸಂಭವಿಸಲು ಕಾರಣ ಏನು ಎಂಬುದು ಇದೀಗ ದೊಡ್ಡಪ್ರಶ್ನೆಯಾಗಿದೆ. ಅಷ್ಟಕ್ಕೂ ಇದಕ್ಕೆ ಚಾಲಕನ ಅಜಾಗರೂಕತೆಯ ಚಾಲನೆಯೇ ಪ್ರಮುಖ ಕಾರಣವಾದರೂ ಇತರ ಕೆಲವು ಅಂಶಗಳ ಪಾತ್ರವೂ ಇದೆ ಎನ್ನಲಾಗಿದೆ.

ಅಪಘಾತಕ್ಕೆ ಕಾರಣ ಏನಿರಬಹುದು ಎಂದು 'ಸರ್ಚ್​' ಮಾಡಲು ಹೋದಾಗ ಉತ್ತರವಾಗಿ 'ಗೂಗಲ್​' ಕೂಡ ಗೋಚರಿಸಿದೆ. ಅರ್ಥಾತ್, ಚಾಲಕ ಗೂಗಲ್ ಮ್ಯಾಪನ್ನೇ ನಂಬಿಕೊಂಡು ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾಗಿದ್ದಾನೆ. ಮತ್ತೊಂದೆಡೆ ಗೂಗಲ್ ಹಾಗೂ ರೈಲ್ವೇ ಇಲಾಖೆಯದ್ದೂ ತಪ್ಪಿದೆ ಎನ್ನಲಾಗುತ್ತಿದೆ.

ಗೂಗಲ್ ಮ್ಯಾಪ್ ತೋರಿಸಿದ್ದ ರಸ್ತೆಯಲ್ಲೇ ಚಾಲಕ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದರೂ ಎರಡು ವರ್ಷಗಳ ಹಿಂದೆಯೇ ಆ ರಸ್ತೆಯನ್ನು ರೈಲ್ವೇ ಇಲಾಖೆ ಮುಚ್ಚಿಸಿತ್ತು. ಅದು ಗೂಗಲ್ ಗಮನಕ್ಕೆ ಬಂದಿತ್ತೋ ಇಲ್ಲವೋ ಅಥವಾ ಬಂದಿದ್ದೂ ಅಪ್​ಡೇಟ್​ ಮಾಡಿಲ್ಲವೋ ಎಂಬ ಬಗ್ಗೆ ಇದೀಗ ಚರ್ಚೆ ಹುಟ್ಟಿಕೊಂಡಿದೆ. ಮತ್ತೊಂದೆಡೆ ರಸ್ತೆ ಮುಚ್ಚಿರುವ ಬಗ್ಗೆ ಸೂಚನೆಗಳನ್ನು ರೈಲ್ವೇ ಇಲಾಖೆ ಹಾಕಿತ್ತೇ ಇಲ್ಲವೇ ಎಂಬ ನಿಟ್ಟಿನಲ್ಲೂ ಪ್ರಶ್ನೆಗಳೂ ಮೂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net