ರೈಲಿಗೇ ಡಿಕ್ಕಿ ಹೊಡೆದ ಟಿಪ್ಪರ್; ಚಾಸಿಸ್​ನಿಂದಲೇ ಕಿತ್ತುಹೋಯ್ತು ಬಾಡಿ!

Train 1
Published on

ಆನೇಕಲ್: 'ಅವಸರವೇ ಅಪಘಾತಕ್ಕೆ ಕಾರಣ, ಅಜಾಗರೂಕತೆಯ ಚಾಲನೆಯೇ ಅನಾಹುತಕ್ಕೆ ಆಹ್ವಾನ' ಎಂಬಿತ್ಯಾದಿ ಎಚ್ಚರಿಕೆಯ ಸಂದೇಶಗಳನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದಕ್ಕೆ ಇದೂ ಒಂದು ಉತ್ತಮ ಉದಾಹರಣೆ.

ರಸ್ತೆಯಲ್ಲದ ಜಾಗದಲ್ಲಿ ಟಿಪ್ಪರ್ ಚಲಾಯಿಸಿಕೊಂಡು ರೈಲ್ವೆ ಹಳಿ ಕ್ರಾಸ್ ಮಾಡಲು ಹೋಗಿ ಅಪಘಾತ ಸಂಭವಿಸಿದೆ. ಟಿಪ್ಪರ್ ಮೂಲಕ ರೈಲ್ವೆ ಹಳಿಯನ್ನು ಕ್ರಾಸ್ ಮಾಡುತ್ತಿದ್ದಾಗಲೇ ಮೈಸೂರಿನಿಂದ ತಮಿಳುನಾಡಿನ ಪುದುಕೋಟೈಗೆ ಹೋಗುತ್ತಿದ್ದ ಎಕ್ಸ್​ಪ್ರೆಸ್​ ರೈಲು ಬಂದುಅಪ್ಪಳಿಸಿದ ರಭಸಕ್ಕೆ ಟಿಪ್ಪರ್ ಸಂಪೂರ್ಣ ಜಖಂಗೊಂಡಿದೆ.

ಹೀಗೆ ಸಂಭವಿಸಿದ ಅಪಘಾತದಲ್ಲಿ ಟಿಪ್ಪರ್ ಯಾವ ಪರಿಯಲ್ಲಿ ಜಖಂಗೊಂಡಿದೆ ಎಂದರೆ ಚಾಸಿಸ್​ನಿಂದ ಟಿಪ್ಪರ್ ಬಾಡಿಯೇ ಕಿತ್ತುಹೋಗಿದೆ. ಬೆಂಗಳೂರು ಗ್ರಾಮಾಂತರದ ಆನೇಕಲ್​ನ ಹುಸ್ಕೂರಿನ ಆವಲಹಳ್ಳಿ ಗ್ರಾಮದ ಸಮೀಪ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net