ಟಿಪ್ಪರ್, ಟ್ರ್ಯಾಕ್ಟರ್ ಬ್ಯಾಟರಿ ಕಳವು

Published on

ನರಗುಂದ: ಪಟ್ಟಣದ ವಿವಿಧೆಡೆ ನಿಲ್ಲಿಸಿದ್ದ ಟಿಪ್ಪರ್ ಹಾಗೂ ಟ್ರ್ಯಾಕ್ಟರ್‌ಗಳ ಬ್ಯಾಟರಿ ಕಳವಾಗಿರುವ ಘಟನೆ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದೆ.

ನಗರದ ಸವದತ್ತಿ ರಸ್ತೆಗೆ ಹೊಂದಿಕೊಂಡಿರುವ ಕೆಎಚ್‌ಬಿ ಕಾಲನಿಯಲ್ಲಿ ನಿಲ್ಲಿಸಿದ್ದ ಸಂತೋಷ ಗುರಪ್ಪ ಹಂಚಿನಾಳ ಎಂಬುವವ ಎರಡು ಟಿಪ್ಪರ್‌ಗಳಿಗೆ ಅಳವಡಿಸಿದ್ದ 60 ಸಾವಿರ ರೂ. ಬೆಲೆಬಾಳುವ 4 ಬ್ಯಾಟರಿ ಜೂ.5 ರಂದು ಕಳವಾಗಿವೆ.

ತಾಲೂಕಿನ ಜಗಾಪೂರ ಗ್ರಾಮದ ಈರಪ್ಪ ಮೈಲಾರಪ್ಪ ಚುಳಕಿ ಎಂಬುವರ ಟಿಪ್ಪರ್‌ಗೆ ಅಳವಡಿಸಿದ್ದ 30 ಸಾವಿರ ರೂ. ಮೌಲ್ಯದ ಎರಡು ಬ್ಯಾಟರಿ, ಪಟ್ಟಣದ ಮಹೇಶ ಜಾಧವ ಎಂಬುವರ ಟ್ರ್ಯಾಕ್ಟರ್‌ಗೆ ಅಳವಡಿಸಿದ್ದ 15 ಸಾವಿರ ರೂ. ಮೌಲದ್ಯ 1 ಬ್ಯಾಟರಿ ಸೇರಿ ಒಟ್ಟು,1.5 ಲಕ್ಷ ರೂಪಾಯಿ ಮೌಲ್ಯದ 7 ಬ್ಯಾಟರಿಗಳು ಕಳವಾಗಿವೆ. ಈ ಕುರಿತು ಟಿಪ್ಪರ್ ಮಾಲೀಕ ಸಂತೋಷ ಹಂಚಿನಾಳ ಆ.11ರಂದು ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net