ಟಿಪ್ಪರ ಹರಿದು ಸ್ಕೂಟರ್​ ಚಾಲಕ ಸಾವು

Crime Logo
Published on

ರಾಣೆಬೆನ್ನೂರ: ಟಿಪ್ಪರ್​ ಲಾರಿ ಹರಿದು ಸ್ಕೂಟರ್​ ಚಾಲಕರೊಬ್ಬರು ಸ್ಥಳದಲ್ಲಿಯೆ ಮೃತಪಟ್ಟ ಟನೆ ಇಲ್ಲಿಯ ಪಂಚಮುಖಿ ದೇವಸ್ಥಾನದ ಕ್ರಾಸ್​ ಬಳಿ ಹಳೆ ಪಿ.ಬಿ. ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿಯ ಸಿದ್ಧಾರೂಢಮಠ ನಗರದ ನಾಗರಾಜ ಮುಧೋಳಮಠ (65) ಮೃತ ದುರ್ದೈವಿ.
ಇವರು ಬಸ್​ ನಿಲ್ದಾಣದ ಕಡೆಯಿಂದ ಸಿದ್ಧಾರೂಢ ನಗರದ ಕಡೆಗೆ ತೆರಳುತ್ತಿದ್ದರು. ಈ ಸಮಯದಲ್ಲಿ ರಸ್ತೆ ಕ್ರಾಸ್​ ಮಾಡುತ್ತಿದ್ದಾಗ ಟಿಪ್ಪರ್​ ಡಿಕ್ಕಿ ಹೊಡೆದಿದೆ. ಇದರಿಂದ ಟಿಪ್ಪರ್​ನ ಹಿಂದಿನ ಚಕ್ರಕ್ಕೆ ಸಿಲುಕಿದ ನಾಗರಾಜ ಅವರ ದೇಹ ಸಂರ್ಪೂಣ ಛಿದ್ರವಾಗಿ ಹೋಗಿದೆ. ಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣನವರ, ಸಿಪಿಐ ಡಾ. ಶಂಕರ ಹಾಗೂ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net