ಟಿಪ್ಪರ್​ ಲಾರಿ ಹರಿದು ಓರ್ವ ಸಾವು

Crime Logo
Published on

ರಟ್ಟಿಹಳ್ಳಿ: ಟಿಪ್ಪರ್​ ಲಾರಿ ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿಯ ಭಗತಸಿಂಗ್​ ವೃತ್ತದಲ್ಲಿ ಗುರುವಾರ ನಡೆದಿದೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿಯ ನಿವಾಸಿ ಶಿವಶಂಕರ ಎಸ್​.ಟಿ. (37) ಮೃತ ವ್ಯಕ್ತಿ.

ಈತ ರಸ್ತೆ ಬದಿ ನಿಂತಿದ್ದಾಗ ಟಿಪ್ಪರ್​ ಲಾರಿ ಚಾಲಕ ನಿರ್ಲಕ್ಷ$್ಯತನದಿಂದ ಲಾರಿ ಓಡಿಸಿ ಈತನ ಮೇಲೆ ಹಾಯಿಸಿದ್ದಾನೆ ಎನ್ನಲಾಗಿದೆ. ಘಟನೆಯಿಂದ ಶಿವಶಂಕರ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net