ಟಿಪ್ಪರ್ ಹಾಯ್ದು ಪಾದಚಾರಿ ಸಾವು

Accident
Published on

ಅಥಣಿ: ಪಟ್ಟಣದ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯ ಶಿವಾಜಿ ವೃತ್ತದಲ್ಲಿ ಗುರುವಾರ ಟಿಪ್ಪರ್ ಹಾಯ್ದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಟ್ಟಣದ ನಿವಾಸಿ ಮಹೇಶ ಅನಿಲ ಭೋಸಲೆ(33) ಮೃತಪಟ್ಟವರು. ರಸ್ತೆಯ ಡಿವೈಡರ್ ದಾಟುವ ವೇಳೆ ವೇಗದಿಂದ ಬಂದ ಟಿಪ್ಪರ್ ಪಾದಚಾರಿ ಮೇಲೆ ಹಾಯ್ದು ಹೋಗಿದೆ.

ಮೃತ ವ್ಯಕ್ತಿಯ ದೇಹ ಛಿದ್ರಗೊಂಡಿದೆ. ಅಪಘಾತ ಸಂಭವಿಸಿ ವ್ಯಕ್ತಿ ಮೃತಪಟ್ಟಿದ್ದರೂ ಟಿಪ್ಪರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ರಸ್ತೆ ಪಕ್ಕದ ಸಿಸಿ ಕ್ಯಾಮರಾದಲ್ಲಿ ಅಪಘಾತದ ದೃಶ್ಯಾವಳಿ ದಾಖಲಾಗಿದ್ದು, ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net