

ಮೂಲ್ಕಿ: ನಿಡ್ಡೋಡಿ ಮುಚ್ಚೂರು ಕಡೆಯಿಂದ ಮೂಲ್ಕಿಗೆ ಟಿಪ್ಪರ್ಗಳಲ್ಲಿ ಎಗ್ಗಿಲ್ಲದೆ ಕೆಂಪು ಹಾಗೂ ಕಪು$್ಪಕಲ್ಲುಗಳ ಹಾಗೂ ಜಲ್ಲಿ ಮತ್ತು ಮರಳು ಸಾಗಾಟ ನಡೆಯುತ್ತಿದ್ದು, ವೇಗವಾಗಿ ಸಾಗುವ ಗಾಡಿಗಳಿಂದ ರಸ್ತೆ ಸಂಚಾರ ಜನ ಸಾಮಾನ್ಯರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ನಿಡ್ಡೋಡಿ ಮುಚ್ಚೂರಿನಿಂದ ಕಿನ್ನಿಗೋಳಿ & ಮೂಲ್ಕಿ ರಾಜ್ಯ ಹೆದ್ದಾರಿ ಮೂಲಕ ಉಡುಪಿ ಜಿಲ್ಲೆಗೆ ನಿಯಮಗಳನ್ನು ಗಾಳಿಗೆ ತೂರಿ ರ್ಟಪಾಲುಗಳನ್ನು ಹಾಕದೆ ಕಲ್ಲುಸಾಗಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಅತಿ ವೇಗದಿಂದ ಸಾಗುವ ಟಿಪ್ಪರ್ಗಳಿಂದ ಹಾರುವ ಮಣ್ಣು ಧೂಳು ಹಾಗೂ ಚಿಕ್ಕ ಕಲ್ಲುಗಳಿಂದ ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಅದರಲ್ಲೂ ಬೆಳಗಿನ ಹೊತ್ತು ಅತಿ ವೇಗದಿಂದ ಚಲಿಸುವ ಟಿಪ್ಪರ್ ವಾಹನದಿಂದ ದ್ವಿಚಕ್ರ ವಾಹನ ಚಾಲಕರು ಹಾಗೂ ಮುಂಜಾನೆ ವಾಕಿಂಗ್ ಹೋಗುವವರು ಭಯಭೀತರಾಗಿದ್ದಾರೆ
ಈ ಬಗ್ಗೆ ಟ್ರಾಫಿಕ್ ಪೊಲೀಸ್ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅತಿ ವೇಗದಿಂದ ಸಾಗುವ ಟಿಪ್ಪರ್ಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.