

ಚಿಕ್ಕಮಗಳೂರು: ಟಿಪ್ಪರ್ ಲಾರಿ ಹಾಗೂ ಟ್ರಾÈಕ್ಟರ್‌ಗಳಿಗೆ ಅಳವಡಿಸಿರುವ ಜಿಪಿಎಸ್ ತಾಂತ್ರಿಕ ದೋಷ ಮತ್ತು ಪರವಾನಗಿ ಬಗ್ಗೆ ಯಾವುದೇ ಸರಿಯಾದ ಮಾಹಿತಿ ನೀಡದೆ ವಾಹನಗಳಿಗೆ ವಿಧಿಸಿರುವ ದಂಡವನ್ನು ಸಂಪೂರ್ಣ ರದ್ದು ಮಾಡುವಂತೆ ಒತ್ತಾಯಿಸಿನ ಟಿಪ್ಪರ್ ಲಾರಿ ಮತ್ತು ಟ್ರಾÈಕ್ಟರ್ ಮಾಲೀಕರು ಹಾಗೂ ಚಾಲಕರ ಸಂಘದಿAದ ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ವಾಹನಗಳಿಗೆ ಪರವಾನಗಿ ಪಡೆದು ಕಾನೂನು ಪ್ರಕಾರವೇ ವಾಹನಗಳಿಗೆ ಖನಿಜ ತುಂಬಿಸಿ ಸಾಗಣೆ ಮಾಡಿದರೂ ಜಿಪಿಎಸ್ ತಂತ್ರಾAಶ ಆಧರಿಸಿ ದಂಡ ವಿಧಿಸಲಾಗುತ್ತಿದೆ. ವಾಹನಗಳು ಕ್ರಷರ್‌ಗೆ ಉಪ ಖನಿಜ ತುಂಬಲು ಹೋದಾಗ ಕ್ರಷರ್‌ನಲ್ಲಿ ಮೆಟೀರಿಯಲ್ ಇಲ್ಲದೆ ವಾಹನ ಹಿಂದಿರುಗಿದಾಗಲೂ ದಂಡ ವಿಧಿಸಲಾಗಿದೆ. ಹೀಗೆ ವಿಧಿಸಿರುವ ದಂಡವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ವಾಹನಗಳು ರಿಪೇರಿಗಾಗಿ ಗ್ಯಾರೇಜ್‌ಗೆ ಹೋದಾಗ ವೆಲ್ಡಿಂಗ್ ಕೆಲಸದ ವೇಳೆ ಬ್ಯಾಟರಿ ಡಿಸ್‌ಕನೆಕ್ಟ್ ಮಾಡಿದರೂ ದಂಡ ವಿಧಿಸುತ್ತಿದ್ದಾರೆ. ಕ್ರಷರ್‌ನಲ್ಲಿ ಪರವಾನಗಿ ಪಡೆಯುವಾಗ ತಾಂತ್ರಿಕ ಸಮಸ್ಯೆ ಇದ್ದರೆ ಜಿಪಿಎಸ್‌ಗೆ ೧೦,೫೦೦, ರಿನಿವಲ್‌ಗೆ ೫,೫೦೦ ದಂಡ ವಿಧಿಸಿ ಜಿಪಿಎಸ್ ಬಗ್ಗೆ ಮಾಹಿತಿ ನೀಡದೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡಲೇ ಗಮನ ಹರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು ಎಂದು ಜಿಲ್ಲಾಡಳಿತವನ್ನು ಪ್ರತಿಭಟನಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಕ್ರಷರ್ ಮಾಲಿಕರ ಸಂಘದ ನಾಸಿರ್, ಲಾರಿ ಮಾಲಿಕರ ಸಂಘದ ಅಧ್ಯಕ್ಷ ಕೆಂಪನಹಳ್ಳಿ ಮಂಜುನಾಥ್, ಉಪಾಧ್ಯಕ್ಷ ಜಗದೀಶ್, ಪ್ರಮುಖರಾದ ಸುರೇಶ್, ಜಯದೀಪ್, ರಾಜಣ್ಣ ಮತ್ತಿತರರಿದ್ದರು.